ETV Bharat / state

ಬಿಜೆಪಿಯವರು ಗಲೆಭೆಗಳನ್ನ ಸೃಷ್ಟಿಸುವ ಕೆಲಸದಲ್ಲಿ ನಿರತರಾಗಿದ್ದಾರೆ : ಸಿದ್ದರಾಮಯ್ಯ ಆರೋಪ

author img

By

Published : Feb 18, 2023, 10:27 PM IST

Updated : Feb 18, 2023, 11:04 PM IST

ಬಿಜೆಪಿಗರು ಹಿಜಾಬ್, ಲವ್ ಜಿಹಾದ್, ಕೋಮು ಗಲೆಭೆಯಂತಹ ಕೆಲಸದಲ್ಲಿ ನಿರತ- ಅಶ್ವತ್ಥನಾರಾಯಣ್​ ವಿರುದ್ಧವೂ ಸಿದ್ದರಾಮಯ್ಯ ಕಿಡಿ - ಈ ಬಾರಿ ಕಾಂಗ್ರೆಸ್​ ಗೆಲ್ಲುತ್ತೆ ಎಂದ ಮಾಜಿ ಸಿಎಂ

ಸಿದ್ದರಾಮಯ್ಯ
ಸಿದ್ದರಾಮಯ್ಯ

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪ

ಕೊಪ್ಪಳ: ಬಿಜೆಪಿಯಲ್ಲಿರುವ ನಾಯಕರು ಸಾಮಾಜದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಅವರೆಲ್ಲ ಹಿಜಾಬ್, ಲವ್ ಜಿಹಾದ್, ಹತ್ಯೆ, ಕೋಮು ಗಲೆಭೆಗಳನ್ನ ಸೃಷ್ಟಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಇಲ್ಲಿಯ ಯಲಬುರ್ಗಾದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ, ರಾಜ್ಯದ ಜನರು ಸಾಮರಸ್ಯದಿಂದ ಇರಬೇಕಾಗಿರುವುದು ಬಿಜೆಪಿಗೆ ಬೇಕಾಗಿಲ್ಲ. ಜನರು ಸದಾ ಒಂದಿಲ್ಲೊಂದು ವಿಷಯಕ್ಕೆ ಬಡೆದಾಡುಕೊಂಡು ಇರಬೇಕು. ಜನರನ್ನ ಒಡೆದಾಳುವ ನೀತಿ ಬಿತ್ತಿದವರು ಬಿಜೆಪಿಗರು. ಹಾಗಾಗಿ ಜನ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದರು.

ಯಲಬುರ್ಗಾದಲ್ಲಿ ರಾಯರೆಡ್ಡಿ ಸೋಲುವ ವ್ಯಕ್ತಿಯಲ್ಲ. ಯಾಕೆ ಈ ಕ್ಷೇತ್ರದ ಜನರು ಅವರ ಕೈಹಿಡಿದಿಲ್ಲ ಎನ್ನುವುದು ನನಗೆ ಗೊತ್ತಾಗತಿಲ್ಲ. ಅವರಷ್ಟು ಕೆಲಸ ಮಾಡಿದ ಶಾಸಕ, ಸಚಿವ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸಿಗುವುದಿಲ್ಲ. ಈ ಬಾರಿ ರಾಯರೆಡ್ಡಿ ನೂರಕ್ಕೆ ನೂರು ಗೆಲ್ಲುತ್ತಾರೆ. ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೆ, ಆ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಬಿಜೆಪಿ ಸಚಿವ ಅಶ್ವತ್ಥನಾರಾಯಣ್​ ಹೇಳುತ್ತಾರೆ ಟಿಪ್ಪುವಿನ ಹತ್ಯೆ ಮಾಡಿದಂತೆ ಸಿದ್ದರಾಮಯ್ಯ ಅವರನ್ನ ಮುಗಿಸಬೇಕೆಂದು. ಅವರಿಗೆ ತಲೆ ಸರಿ ಇಲ್ಲ ಎಂದೆನಿಸುತ್ತದೆ. ಅಶ್ವತ್ಥನಾರಾಯಣ್​ ಅಲ್ಲ ಅಸ್ವಸ್ಥ ನಾರಾಯಣ ಇರಬೇಕು ಎಂದು ಸಿದ್ದರಾಮಯ್ಯ ಟೀಕಿಸಿದರು.

ರಾಯಣ್ಣನ ಆದರ್ಶ ಯುವಕರಿಗೆಲ್ಲ ಸ್ಪೂರ್ತಿ ಯಾಗಲಿ: ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು. ಅವರ ಶೌರ್ಯ, ದಿಟ್ಟತನ ಯುವಕರಿಗೆ ಸ್ಪೂರ್ತಿ ಆಗಲಿ ಎಂದು ಯಲಬುರ್ಗಾದಲ್ಲಿ ಹಮ್ಮಿಕೊಂಡಿದ್ದ ಸಂಗೊಳ್ಳಿರಾಯಣ್ಣ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಳಿದರು. ನಾವು ಸಮಾಜದಲ್ಲಿ ಬೇರೆದವರಿಗೆ ಕೆಡಕನ್ನು ಬಯಸಬಾರದು, ಒಳ್ಳೆಯದನ್ನೇ ಬಯಸಬೇಕು ಎಂದು ನುಡಿದರು.

ಒಳ್ಳೆಯವರ ಜೊತೆಗಿರಿ: ಸರ್ಕಾರ ರಾಜ್ಯದ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಲು ಇರುತ್ತದೆ. ಇದನ್ನ ಪ್ರತಿಯೊಬ್ಬರು ಅರ್ಥ ಮಾಡ್ಕೊಳ್ಳಬೇಕಾಗತ್ತೆ. ಸಮಾಜಕ್ಕೆ ಒಳ್ಳೆಯದನ್ನು ಬಯಸುವವರ ಅವರ ಜೊತೆ ಇರಿ, ಯಾವಾಗಲೂ ಕೆಟ್ಟದ್ದನ್ನ ಬಯಸುವವರ ಜೊತೆ ಇರಬೇಡಿ. ನಾನು ಸಮಾಜಕ್ಕೆ ಒಳ್ಳೆಯದನ್ನ ಮಾಡಿದ್ರೆ ನನ್ನ ಜೊತೆ ಇರಿ, ನಾನು ಕೆಟ್ಟದ್ದನ್ನು ಮಾಡಿದ್ರೆ ನನ್ನ ಜೊತೆ ಇರಬೇಡಿ. ರಾಜಕಾರಣಿಗಳು ಸಮುದಾಯಗಳ ಮಧ್ಯೆ ಒಡಕು ತಂದಿಡುತ್ತಿದ್ದಾರೆ. ಅವರ ರಾಜಕೀಯ ಲಾಭಕ್ಕೆ ಏನ ಬೇಕಾದ್ರು ಮಾಡುತ್ತರೆ ಎಚ್ಚರದಿಂದಿರಿ. ಮನುಷ್ಯ ಮನುಷ್ಯನನ್ನು ದ್ವೇಷ ಮಾಡೋರು ರಾಕ್ಷಸರು. ಮನುಷ್ಯ ಮನುಷ್ಯನನ್ನ ಪ್ರೀತಿಸಬೇಕು, ಅದರ ಜೊತೆ ನಾಡು-ನುಡಿ, ನೆಲ-ಜಲ ಪ್ರೀತಿ ಮಾಡಬೇಕು ಎಂದರು.

ಸಂಗೊಳ್ಳಿ ರಾಯಣ್ಣನ ನೆನಪು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಾಹಸಮಯ ಇತಿಹಾಸ ನೆನಪು ಮಾಡಿಕೊಂಡ ಸಿದ್ದರಾಮಯ್ಯ ಎಲ್ಲಾ ಕಾಲದಲ್ಲೂ ಕುತಂತ್ರಿಗಳು ಇರುತ್ತಾರೆ. ಅಂದು ಮೋಸ ಮಾಡಿ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟರು. ಹೀಗಾಗಿ ರಾಯಣ್ಣ ಸೆರೆ ಆದ. ನಾನು ಸಿಎಂ ಇದ್ದ ಅವಧಿಯಲ್ಲಿ ಸಂಗೊಳ್ಳಿಯಲ್ಲಿ ರಾಕ್ ಗಾರ್ಡನ್ ಮಾಡಲು 282 ಕೋಟಿ ಹಣ ಕೊಟ್ಟು ಜಮೀನು ಖರೀದಿಸಿ ಒಂದು ಸೈನಿಕ ಶಾಲೆಯನ್ನ ಪ್ರಾರಂಭ ಮಾಡಿದೆ. ಹಾಗೇ ಕಿತ್ತೂರು ಚೆನ್ನಮ್ಮ ಜಯಂತಿ ಮಾಡಿದ್ದು ನಾವು, ಕೆಂಪೇಗೌಡ ಜಯಂತಿ ಮಾಡಿದ್ದು ದೇವೇಗೌಡ, ಕುಮಾರಸ್ವಾಮಿ, ಕೆಂಗಲ್ ಹನಮಂತಯ್ಯ ಅಲ್ಲ. ಚೆನ್ನಮ್ಮ ಜಯಂತಿ ಮಾಡಿದ್ದು ಬೊಮ್ಮಾಯಿ ಅಲ್ಲ, ನಿಜಲಿಂಗಪ್ಪ ಅಲ್ಲ, ಸಿದ್ದರಾಮಯ್ಯ ಮಾಡಿದ್ದು ಎಂದು ಹೇಳಿದರು.

ಇದನ್ನೂ ಓದಿ: ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಲ್ಲಣ ಆರಂಭ : ಹೆಚ್​ಡಿ ಕುಮಾರಸ್ವಾಮಿ

Last Updated : Feb 18, 2023, 11:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.