ಕೊಪ್ಪಳ: ಈಗ ಎಲ್ಲೆಡೆ ಐಪಿಎಲ್ ಕಾವು ಜೋರಾಗಿದೆ. ಈ ನಡುವೆ ಸದಾ ಒಂದಿಲ್ಲೊಂದು ರೀತಿಯಲ್ಲಿ ಕ್ರಿಯಾಶೀಲರಾಗಿರುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಶ್ರೀಗಳು ಕ್ರಿಕೆಟ್ ಆಡಿ ಗಮನ ಸೆಳೆದಿದ್ದಾರೆ.
ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಯುವಕರೊಂದಿಗೆ ಕ್ರಿಕೆಟ್ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಶ್ರೀಗಳು ಬೌಲಿಂಗ್ ಮಾಡಿ ತಮ್ಮ ಕ್ರಿಕೆಟ್ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಶ್ರೀಗಳು ಮಠದಿಂದ ಹೊರಗೆ ಹೋಗುತ್ತಿಲ್ಲ. ತಮ್ಮ ದೈನಂದಿನ ಪೂಜೆ, ಜಪತಪದ ನಡುವೆ ಯುವಕರೊಂದಿಗೆ ಕ್ರಿಕೆಟ್ ಆಡಿ ಸಮಯ ಕಳೆದಿದ್ದಾರೆ.