ಕೊಪ್ಪಳ: ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಸ್ಥಳದ ಅಭಾವದಿಂದ ಸ್ಥಳಾಂತರಗೊಂಡಿದ್ದ ಕುರಿ ಮತ್ತು ಮೇಕೆ ಸಂತೆ ನ್ಯಾಯಾಲಯದ ಆದೇಶದಂತೆ ಇಂದು ಮತ್ತೆ ಪ್ರಾರಂಭಗೊಂಡಿದೆ. ಸ್ಥಳದ ಅಭಾವದಿಂದಾಗಿ ಕಳೆದ 7 ವರ್ಷಗಳ ಹಿಂದೆ ಕೊಪ್ಪಳ ತಾಲೂಕಿನ ಬೂದಗುಂಪಾ ಬಳಿಗೆ ಸಂತೆಯನ್ನು ಸ್ಥಳಾಂತರಿಸಲಾಗಿತ್ತು. ಈ ಘಟನೆ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿತ್ತು. ಕೂಕನಪಳ್ಳಿ ಹಾಗೂ ಬೂದಗುಂಪಾ ಗ್ರಾಮಗಳ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ ಸಹ ನಡೆದಿತ್ತು.
ಕೂಕನಪಳ್ಳಿ ಕುರಿ ಸಂತೆ ಸ್ಥಳಾಂತರ ಕುರಿತಂತೆ ಸ್ಥಳೀಯರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಹಾಕಿದ್ದರು. ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯದ ಧಾರವಾಡ ಪೀಠ, ಕೂಕನಪಳ್ಳಿಯಲ್ಲಿ ಸಂತೆ ನಡೆಸಲು ಆದೇಶ ನೀಡಿತ್ತು.
ಇದನ್ನೂ ಓದಿ: ನೋಡಿವಳಂದಾವ.. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಮಲ್ಲಾಘಟ್ಟ ಕೆರೆ
ಕಳೆದ ಆಗಸ್ಟ್ 18 ರಂದು ಧಾರವಾಡದ ಹೈಕೋರ್ಟ್ ನೀಡಿದ ತೀರ್ಪಿನಂತೆ ಇಂದಿನಿಂದ ಕೂಕನಪಳ್ಳಿಯಲ್ಲಿ ಕುರಿ, ಮೇಕೆ ಮಾರುಕಟ್ಟೆ ಆರಂಭವಾಗಿದ್ದು, ಸಾವಿರಾರು ಕುರಿಗಾಯಿಗಳು, ಕೋಳಿ ಸಾಕಾಣಿಕೆದಾರರು ಆಗಮಿಸಿದ್ದಾರೆ. ತಮಿಳುನಾಡು, ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಯಿಂದ ಕುರಿ ಖರೀದಿಗೆ ವ್ಯಾಪಾರಿಗಳು, ಮಾರಾಟಗಾರರು ಆಗಮಿಸಿದ್ದು ಜನಜಂಗುಳಿಯಿಂದ ಕೂಡಿದೆ.
ಇದನ್ನೂ ಓದಿ: ನೀರು ಪಾಲಾದ ನಾಲ್ವರು ವಿದ್ಯಾರ್ಥಿಗಳು: ಮೂವರ ಮೃತದೇಹ ಪತ್ತೆ, ಓರ್ವನಿಗಾಗಿ ಮುಂದುವರಿದ ಶೋಧ