ಕುಷ್ಟಗಿ (ಕೊಪ್ಪಳ): ವಿವಾಹಿತ ಮಹಿಳೆ ಮೇಲೆ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ವಿವಾಹಿತ ಮಹಿಳೆ ರಾತ್ರಿ ಚಿಕ್ಕಮ್ಮನ ಮಗಳೊಂದಿಗೆ ಬಹಿರ್ದೆಸೆಗೆ ತೆರಳಿದ್ದರು. ಈ ವೇಳೆ ಅದೇ ಗ್ರಾಮದ ಹನುಮೇಶ ಹಿರೇಲಕ್ಷ್ಮಪ್ಪ ವಾಲ್ಮೀಕಿ ಎಂಬಾತ ಆಕೆಯನ್ನು ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಈ ಸಂದರ್ಭದಲ್ಲಿ ಇಬ್ಬರೂ ಚೀರಾಡಿದ್ದಾರೆ. ಪತಿ ಸೇರಿದಂತೆ ಸ್ಥಳೀಯರು ಆಗಮಿಸುವಷ್ಟರಲ್ಲಿ ಹನುಮೇಶ ವಾಲ್ಮೀಕಿ ಆಕೆಗೆ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂದು ಆರೋಪಿಸಿಲಾಗಿದೆ. ನೊಂದ ಮಹಿಳೆ ನೀಡಿದ ದೂರಿನನ್ವಯ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಆರೋಪಿ ಹನುಮೇಶ ವಾಲ್ಮೀಕಿ ವಿರುದ್ಧ ಪ್ರಕರಣ ದಾಖಲಾಗಿದೆ.