ETV Bharat / state

ಪಿಎಸ್​ಐ ಗೀತಾಂಜಲಿ ಶಿಂಧೆಗೆ ಮುಖ್ಯಮಂತ್ರಿಗಳ‌ ಚಿನ್ನದ ಪದಕ

ಕುಷ್ಟಗಿ ತಾಲೂಕಿನಲ್ಲಿ ಮೊದಲ ಸಿಎಂ‌ ಪದಕ ಪಡೆದ ಮಹಿಳಾ ಸಬ್ ಇನ್ಸ್​ಪೆಕ್ಟರ್ ಎನ್ನುವ ಕೀರ್ತಿಗೆ ಪಿಎಸ್​ಐ ಗೀತಾಂಜಲಿ ಶಿಂಧೆ ಪಾತ್ರರಾಗಿದ್ದಾರೆ.

author img

By

Published : Mar 23, 2021, 9:36 PM IST

PSI Gitanjali Shinde
ಪಿಎಸ್​ಐ ಗೀತಾಂಜಲಿ ಶಿಂಧೆ

ಕುಷ್ಟಗಿ/ಕೊಪ್ಪಳ: ಕೊರೊನಾ ನಿಯಂತ್ರಣದ ಲಾಕ್​ಡೌನ್ ಸಂದರ್ಭದಲ್ಲಿ ಜನಜಾಗೃತಿ, ಉತ್ತಮ‌ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿನ ತಾವರಗೇರಾ ಪೊಲೀಸ್ ಠಾಣಾ ಪಿಎಸ್​ಐ ಗೀತಾಂಜಲಿ ಶಿಂಧೆ ಪ್ರಸಕ್ತ ಸಾಲಿನ ಮುಖ್ಯಮಂತ್ರಿಗಳ‌ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಉತ್ತಮ ಸೇವೆ ಪರಿಗಣಿಸಿರುವ ರಾಜ್ಯದ 115 ಪೊಲೀಸ್​ ಅಧಿಕಾರಿಗಳಲ್ಲಿ ಕುಷ್ಟಗಿ ತಾಲೂಕಿನ ತಾವರಗೇರಾ ಪೊಲೀಸ್ ಠಾಣೆಯ ಪಿಎಸ್​ಐ ಗೀತಾಂಜಲಿ ಶಿಂಧೆ ಒಬ್ಬರಾಗಿದ್ದಾರೆ. 2020ರ ಲಾಕ್​ಡೌನ್ ಸಂದರ್ಭದಲ್ಲಿ ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸಿ ಉತ್ತಮ ಸೇವೆಯೊಂದಿಗೆ ಕಡಿಮೆ ಶೇಕಡಾವಾರು ಪ್ರಕರಣಗಳ ತನಿಖೆ ಬಾಕಿ ಇರಿಸಿಕೊಂಡಿರುವುದು, ತುರ್ತಾಗಿ ಅಪರಾಧ ಪ್ರಕರಣಗಳ ಪತ್ತೆ ಹಚ್ಚಿ, ವಸ್ತುಗಳ ರಿಕವರಿ ಮಾಡಿದ ಹಿನ್ನೆಲೆಯಲ್ಲಿ ಈ ಮಾನ್ಯತೆ ಸಿಕ್ಕಿದೆ.

ಕುಷ್ಟಗಿ ತಾಲೂಕಿನಲ್ಲಿ ಮೊದಲ ಸಿಎಂ‌ ಪದಕ ಪಡೆದ ಮಹಿಳಾ ಸಬ್ ಇನ್ಸ್​ಪೆಕ್ಟರ್ ಎನ್ನುವ ಕೀರ್ತಿಗೆ ಗೀತಾಂಜಲಿ ಶಿಂಧೆ ಪಾತ್ರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.