ETV Bharat / state

ದತ್ತಪೀಠದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಏನು ಮಾಡುತ್ತಿದ್ದೀರಿ?: ಮುತಾಲಿಕ್​ - ಬಿಜೆಪಿ ನಾಯಕರ ವಿರುದ್ದ ಪ್ರಮೋದ್​ ಮುತಾಲಿಕ್ ಆಕ್ರೋಶ

ಹಿಂದೂ ಧರ್ಮದಲ್ಲಿ ಒಂದು ಸಂಪ್ರದಾಯ, ಸಂಸ್ಕೃತಿ, ಶಾಸ್ತ್ರವಿದೆ.‌ ಇದು ಕಾಂಗ್ರೆಸ್ ನವರಿಗೆ ಅರ್ಥವಾಗುವುದಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ ಹೇಳಿದ್ದಾರೆ.

ಪ್ರಮೋದ್​ ಮುತಾಲಿಕ್
ಪ್ರಮೋದ್​ ಮುತಾಲಿಕ್
author img

By

Published : May 25, 2022, 10:47 PM IST

ಕೊಪ್ಪಳ: ದತ್ತಪೀಠದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಏನು ಮಾಡುತ್ತಿದ್ದೀರಿ?. ಅಲ್ಲಿನ ಬಿಜೆಪಿ ಎಂಪಿ, ಎಂಎಲ್ಎ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೀವೇನು ನಿದ್ದೆ ಮಾಡುತ್ತಿದ್ದೀರಾ?. ದತ್ತಪೀಠದಲ್ಲಿ ಮುಸ್ಲಿಂಮರು ಹೋಗಿ ಮಾಂಸ ಊಟ ಮಾಡುತ್ತಾರೆ ಎಂದರೆ ಏನು ಅರ್ಥ. ಅಲ್ಲಿ 200 ಮೀಟರ್ ಅಂತರದಲ್ಲಿ ನಮಾಜ್‌ ಮಾಡಬಾರದು, ಮಾಂಸ ಊಟ ಮಾಡಬಾರದು ಎಂಬ ನಿಯಮವಿದೆ. ಪೊಲೀಸ್ ಇಲಾಖೆ ಏನು ಮಾಡುತ್ತಿದೆ?. ದತ್ತಪೀಠದಿಂದಲೇ ಶೋಭಾ ಕರಂದ್ಲಾಜೆ, ಸಿಟಿ ರವಿ ಗೆದ್ದಿದ್ದಾರೆ. ನೀವು ಏನು ಮಾಡುತ್ತಿದ್ದೀರಿ? ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ ಪ್ರಶ್ನಿಸಿದ್ದಾರೆ.

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ ಅವರು ಮಾತನಾಡಿದರು

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಅಲ್ಲಿನ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಯನ್ನು ಕಿತ್ತು ಬಿಸಾಕಿ. ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ. ನಮ್ಮಂತಹ ಹೋರಾಟಗಾರರಿಗೆ, ಹಿಂದುತ್ವವಾದಿಗಳಿಗೆ ರಾಜಕೀಯ ಬಾಗಿಲು ಮುಚ್ಚಿದೆ. ಪ್ರಾಮಾಣಿಕರಿಗೆ ಬೆಲೆ ಇಲ್ಲ. ಬಿಜೆಪಿಗೆ ಯಾವ ಹಿಂದುತ್ವವೂ ಇಲ್ಲ. ಯೋಗಿ ಆದಿತ್ಯನಾಥ ಅವರ ರೀತಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲಿಯೂ ಇಲ್ಲಿಯೂ ಒಂದೇ ಕಾನೂನು ಇದೆ. ರಾಜಕೀಯ ವ್ಯವಸ್ಥೆಯೇ ಲೂಟಿಕೋರ ವ್ಯವಸ್ಥೆಯಾಗಿದೆ. ಡಿ.ಕೆ ಶಿವಕುಮಾರ್ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದರು.

ಹಿಂದೂ ಧರ್ಮದಲ್ಲಿ ಒಂದು ಸಂಪ್ರದಾಯ, ಸಂಸ್ಕೃತಿ, ಶಾಸ್ತ್ರವಿದೆ.‌ ಇದು ಕಾಂಗ್ರೆಸ್ ನವರಿಗೆ ಅರ್ಥವಾಗುವುದಿಲ್ಲ. ಏಕೆಂದರೆ ನೀವು ಮುಸ್ಲಿಮರ ವೋಟಿಗಾಗಿ ಜೊಲ್ಲು ಸುರಿಸುತ್ತೀರಿ. ವೋಟಿಗಾಗಿ ನೀವು ಈ ರೀತಿಯ ಸ್ಟಂಟ್ ಮಾಡುವುದರಿಂದ ಕಾಂಗ್ರೆಸ್ ಯಾವ ಸ್ಥಿತಿಗೆ ಬಂದಿದೆ ಎಂದು ಯೋಚಿಸಿ. ನೀವೇನಾದರೂ ನಮ್ಮ ಸಂಸ್ಕೃತಿ, ಸಂಪ್ರದಾಯ ಶಾಸ್ತ್ರಕ್ಕೆ ಅಪಮಾನ ಮಾಡಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.

ನಿಮಗೆ ನಮ್ಮ ಧರ್ಮದ ಶಾಸ್ತ್ರ, ವಿಜ್ಞಾನ, ಸಂಪ್ರದಾಯ ಕಾಣೋದಿಲ್ಲ. ನಿಮಗೆ ಕೇವಲ ಮಸೀದಿ, ಗೋರಿಗಳು ಕಾಣುತ್ತವೆ. ವಾಸ್ತವಿಕವನ್ನು ಬಿಟ್ಟು ಓಲೈಸುವ ತಂತ್ರವನ್ನು ಡಿ. ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಮಾಡುತ್ತಿರುವುದು ಮೂರ್ಖತನ. ಅದರಿಂದಲೇ ಕಾಂಗ್ರೆಸ್ ನಿರ್ಣಾಮವಾಗುತ್ತದೆ. ಕಾಂಗ್ರೆಸ್ ಮತ್ತು ಕುಮಾರಸ್ವಾಮಿ ನಡುವೆ ಮುಸ್ಲಿಂ ಮತವನ್ನು ಯಾರು ಹೆಚ್ಚು ಪಡೆಯಬೇಕು ಎಂಬ ಕಾಂಪಿಟೇಷನ್ ನಡೆಯುತ್ತಿದೆ.

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದೇವೇಗೌಡರು ಚಂಡಿಕಾ ಹೋಮ ಯಾಕೆ ಮಾಡುತ್ತಾರೆ ಎಂಬುದನ್ನು ಕುಮಾರಸ್ವಾಮಿ ಅವರ ತಂದೆಯನ್ನು ಕೇಳಲಿ. ಸಂಸ್ಕೃತ ಶಬ್ದದ ಮಸೀದಿ ಎಲ್ಲಾದರೂ ಇರುತ್ತದೆಯಾ?. ಜ್ಞಾನವ್ಯಾಪಿ ಅದು ದೇವಸ್ಥಾನ. ಸಾಮರಸ್ಯ ಚೆನ್ನಾಗಿ ಇರಬೇಕು ಎಂದರೆ ದೇವಸ್ಥಾನ ಒಡೆದು ಎಲ್ಲೆಲ್ಲಿ ಮಸೀದಿ ಕಟ್ಟಲಾಗಿದೆಯೋ ಅದನ್ನು ಹಿಂದೂಗಳಿಗೆ ಒಪ್ಪಿಸಲಿ ಎಂದರು.

ಓದಿ: ಚಿಕ್ಕಮಗಳೂರು: ಮಗನ ಪಬ್​ಜಿ ಹುಚ್ಚಿಗೆ ಅಮ್ಮನೇ ಬಲಿ.. ಗುಂಡಿಟ್ಟ ಗಂಡ ಅಂದರ್​​​

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.