ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಕುಕನೂರು ತಾಲೂಕಿನ ತೊಂಡಿಹಾಳ ಗ್ರಾಮದ ಬಳಿ ಇರುವ ಹಳ್ಳದಲ್ಲಿ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳು ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಹೇಶ್ ಹಾಗೂ ನಿಂಗಪ್ಪ ಎಂಬ ಇಬ್ಬರು ಪೊಲೀಸರು ನಾಪತ್ತೆಯಾಗಿದ್ದಾರೆ.
ಈ ಇಬ್ಬರು ಪೊಲೀಸರು ಗದಗ ಜಿಲ್ಲೆಯ ಗಜೇಂದ್ರಗಡಕ್ಕೆ ಸೋಮವಾರ ಬಂದೋಬಸ್ತಗೆಂದು ತೆರಳಿದ್ದರು. ನಿನ್ನೆ ಕರ್ತವ್ಯ ಮುಗಿಸಿ ಮನೆಗೆ ಮರಳುವಾಗ ಮಳೆಯಿಂದಾಗಿ ತುಂಬಿಹರಿಯುತ್ತಿದ್ದ ತೊಂಡಿಹಾಳ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗುತ್ತಿದೆ.
ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಅಗ್ನಿ ಶಾಮಕ ದಳ ಸಿಬ್ಬಂದಿಯಿಂದ ಹಳ್ಳದಲ್ಲಿ ಪೊಲೀಸರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಮಳೆ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ : ಹಳ್ಳ ಉಕ್ಕಿ ಹರಿದು ಸಂಚಾರ ಬಂದ್