ETV Bharat / state

ಅನಾರೋಗ್ಯ ಪೀಡಿತನ ಅಂತ್ಯಸಂಸ್ಕಾರಕ್ಕೂ ತಕರಾರು : ಉದ್ವಿಗ್ನ ಸ್ಥಿತಿ! - ಗಂಗಾವತಿ ಸುದ್ದಿ

ಶರಣ ಬಸವೇಶ್ವರ ಕ್ಯಾಂಪ್​​ನ 43 ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಅಂತ್ಯ ಸಂಸ್ಕಾರಕ್ಕೆ ಮೃತದೇಹ ಗ್ರಾಮದ ಹೊರವಲಯಕ್ಕೆ ತೆಗೆದುಕೊಂಡು ಬರುತ್ತಿದ್ದಂತೆ ನಿವಾಸಿಗಳು ಅಡ್ಡಿಪಡಿಸಿರುವ ಘಟನೆ ನಡೆದಿದೆ.

gangavati
ಅನಾರೋಗ್ಯ ಪೀಡಿತನ ಅಂತ್ಯ ಸಂಸ್ಕಾರಕ್ಕೂ ತಕರಾರು
author img

By

Published : Jul 13, 2020, 9:13 PM IST

ಗಂಗಾವತಿ : ಅನಾರೋಗ್ಯದಿಂದ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೂ ಕೆಲವರು ಅಡ್ಡಿಪಡಿಸಿದ ಘಟನೆ ನಗರದ ಶರಣ ಬಸವೇಶ್ವರ ಕ್ಯಾಂಪ್​ನಲ್ಲಿ ನಡೆದಿದೆ.

ಶರಣಬಸವೇಶ್ವರ ಕ್ಯಾಂಪ್​ನ 43 ವರ್ಷದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ಮೃತದೇಹವನ್ನು ಗ್ರಾಮದ ಹೊರವಲಯಕ್ಕೆ ತೆಗೆದುಕೊಂಡು ಬಂದಾಗ ಅಲ್ಲಿ ಗಾಳೆಮ್ಮ ಕ್ಯಾಂಪ್​​ನ ನಿವಾಸಿಗಳು ಅಡ್ಡಿಪಡಿಸಿರುವ ಘಟನೆ ನಡೆದಿದೆ.

ಅನಾರೋಗ್ಯ ಪೀಡಿತನ ಅಂತ್ಯ ಸಂಸ್ಕಾರಕ್ಕೂ ತಕರಾರು

ಅದು ಕೃಷಿ ಭೂಮಿಯಾಗಿದ್ದು, ಇಲ್ಲಿ ಯಾವುದೇ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಬಾರದು ಎಂದು ಗಾಳೆಮ್ಮ ಕ್ಯಾಂಪ್​ನ ಕೆಲ ಕಾರ್ಮಿಕ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಅಡ್ಡಿಪಡಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತು.

ಕಳೆದ 20 ವರ್ಷದಿಂದ ಗೋನಾಳ ಸೀಮಾದ ನಾಲಾ ಬರ್ಮಾದಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಿಸಿಕೊಂಡು ಬಂದಿದ್ದು, ಇಲ್ಲಿಯೇ ಮಾಡುತ್ತೇವೆ ಎಂದು ಶರಣಬಸವೇಶ್ವರ ಕ್ಯಾಂಪ್​ನ ಜನರು ಪಟ್ಟು ಹಿಡಿದರು. ಬಳಿಕ ಪರಸ್ಪರ ಒಪ್ಪಿಗೆ ಮೇರೆಗೆ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.