ETV Bharat / state

ಬಿಜೆಪಿಯನ್ನು ಎಂದಿಗೂ ದೇಶದ ಜನತೆ ಕ್ಷಮಿಸುವುದಿಲ್ಲ: ಶಿವರಾಜ್ ತಂಗಡಗಿ - Koppal Corona case

ಕೊರೊನಾ ಹಾಗೂ ಲಾಕ್​ಡೌನ್ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿ ಸರ್ಕಾರದ ಕ್ರಮಗಳನ್ನು ದಿಲ್ಲಿಯಿಂದ ಹಳ್ಳಿಯವರೆಗೂ ವಿರೋಧಿಸದೆ ಇಲ್ಲಿಯವರೆಗೂ ಸಹಕಾರ ನೀಡಿದ್ದೇವೆ. ಆದರೆ ಬಿಜೆಪಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದು ಶಿವರಾಜ್​ ತಂಗಡಗಿ ಹೇಳಿದರು.

People of this country never forgive BJP Rule: shivaraj tangadagi
ಬಿಜೆಪಿಯನ್ನು ಎಂದೆಂದಿಗೂ ದೇಶದ ಜನತೆ ಕ್ಷಮಿಸುವುದಿಲ್ಲ: ಶಿವರಾಜ್ ತಂಗಡಗಿ
author img

By

Published : Jun 30, 2020, 8:14 PM IST

ಕುಷ್ಟಗಿ (ಕೊಪ್ಪಳ): ಕೊರೊನಾ ವೈರಸ್ ದೇಶದಲ್ಲಿ ತಡೆಗಟ್ಟಲು ಬಿಜೆಪಿ ನೂರಕ್ಕೆ ನೂರರಷ್ಟು ವಿಫಲ ಆಗಿದ್ದರಿಂದಲೇ ಕೊರೊನಾ ವಿಚಾರದಲ್ಲಿ ಕೈ ತೊಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಈ ಪಕ್ಷವನ್ನು ಎಂದಿಗೂ ದೇಶದ ಜನತೆ ಕ್ಷಮಿಸುವುದಿಲ್ಲ ಎಂದು ಮಾಜಿ ಸಚಿವ ಶಿವರಾಜ್​ ತಂಗಡಗಿ ಹೇಳಿದರು.

ಬಿಜೆಪಿಯನ್ನು ಎಂದಿಗೂ ದೇಶದ ಜನತೆ ಕ್ಷಮಿಸುವುದಿಲ್ಲ: ಶಿವರಾಜ್ ತಂಗಡಗಿ

ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್​ ಅವರ ಪದಗ್ರಹಣದ ಸಮಾರಂಭದ ನೇರ ಪ್ರಸಾರವನ್ನು ಯಶಸ್ವಿಗೊಳಿಸುವ ಹಿನ್ನೆಲೆಯಲ್ಲಿ ಗ್ರಾಪಂ ಹಾಗೂ ಬೂತ್​ ಮಟ್ಟದಲ್ಲಿ ಪೂರ್ವ ಸಿದ್ಧತೆ ಪೂರ್ವಭಾವಿ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೊರೊನಾ ಹಾಗೂ ಲಾಕ್​ಡೌನ್ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿ ಸರ್ಕಾರದ ಕ್ರಮಗಳನ್ನು ದಿಲ್ಲಿಯಿಂದ ಹಳ್ಳಿಯವರೆಗೂ ವಿರೋಧಿಸದೆ ಇಲ್ಲಿಯವರೆಗೂ ಸಹಕಾರ ನೀಡಿದ್ದೇವೆ. ಆದರೆ ಬಿಜೆಪಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.

ಈ ಹಿಂದೆ ಕಾಂಗ್ರೆಸ್ ಪೆಟ್ರೋಲ್​​-ಡೀಸೆಲ್​​ ದರ ಹೆಚ್ಚಳ ಮಾಡಿದ್ದಾಗ ತೀವ್ರವಾಗಿ ವಿರೋಧಿಸಿದ್ದ ಬಿಜೆಪಿ ಈಗಿನ ಪರಿಸ್ಥಿತಿಯಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಪೆಟ್ರೋಲ್​ಗಿಂತ ಡೀಸೆಲ್ ದರ ಹೆಚ್ಚಿದ್ದು, ಆಗ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಮುಖಂಡರು ಈಗ ಎಲ್ಲಿದ್ದಾರೆಂದು ಹುಡುಕುತ್ತಿದ್ದೇವೆ ಎಂದರು.

ಬಿಜೆಪಿಯವರಿಗೆ ಶಕ್ತಿ ಇಲ್ಲ, ಕೊಪ್ಪಳ ಜಿಲ್ಲೆಯ ತಮ್ಮ ಮುಖಂಡರ ಬಗ್ಗೆಯೂ ವಿಶ್ವಾಸವೂ ಇಲ್ಲ. ಜಿಲ್ಲೆಯಲ್ಲಿ ಮೂವರು ತಮ್ಮ ಪಕ್ಷದ ಶಾಸಕರಾಗಿದ್ದಾರೆ. ಈ ಶಾಸಕರ ವಿಶ್ವಾಸದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಬೇರೆ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ತಂದು ಕುಳ್ಳಿರಿಸಿದ್ದಾರೆ. ಅವರಿಗೆ ನಮ್ಮ ಜಿಲ್ಲೆಯ ಬಗ್ಗೆ ಏನೂ ಗೊತ್ತಿದೆ? ಎಂದು ಪ್ರಶ್ನಿಸಿದ ಅವರು, ತಿಂಗಳಿಗೆ ಎರಡು ಬಾರಿ ಬಂದು, ಏನು ತೆಗೆದುಕೊಂಡು ಹೋಗಬೇಕು ಅದನ್ನು ಒಯ್ಯಲು ಬರುತ್ತಿದ್ದಾರೆಂದು ಲೇವಡಿ ಮಾಡಿದರು.

ಬಿಜೆಪಿಯವರಿಗೆ ಒಳ್ಳೆಯ ಕೆಲಸ ಮಾಡುವವರನ್ನು ಕಂಡರೆ ಆಗಿ ಬರುವುದಿಲ್ಲ. ಹೀಗಾಗಿ ಕೊಪ್ಪಳ ಡಿಸಿಯವರನ್ನು ಕೊರೊನಾ ಸಂದರ್ಭದಲ್ಲಿ ವರ್ಗಾಯಿಸಿರುವುದು ಖಂಡನೀಯ ಎಂದರು.

ನಾನು ಸಣ್ಣ ನೀರಾವರಿ ಸಚಿವರಾಗಿದ್ದಾಗ ಸಣ್ಣ ನೀರಾವರಿ ಇಲಾಖೆಯ ತುಂಡು ಗುತ್ತಿಗೆ ಹಗರಣದಲ್ಲಿ ತಕ್ಷಣ ಕ್ರಮ ಕೈಗೊಂಡಿದ್ದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಎಲ್ಲಿಯೇ ಭ್ರಷ್ಟಾಚಾರದ ವಾಸನೆ ಬಡಿಯಲಿ ತಕ್ಷಣವೇ ಕಾಂಗ್ರೆಸ್ ಕ್ರಮ ಕೈಗೊಂಡಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.