ಗಂಗಾವತಿ(ಕೊಪ್ಪಳ): ಇಂದು ಭಾನುವಾರವಾದ ಹಿನ್ನೆಲೆ, ನಗರದ ಮಾಂಸ ಮಾರುಕಟ್ಟೆಯಲ್ಲಿ ಯಾವುದೇ ಸುರಕ್ಷಿತ ವಿಧಾನಗಳಿಲ್ಲದೇ ಗ್ರಾಹಕರು ಚಿಕನ್ ಮತ್ತು ಮಟನ್ ಖರೀದಿಗೆ ಮುಗಿಬಿದ್ದರು.
ಅಂಗಡಿ ಮಾಲೀಕರು ಲಾಕ್ಡೌನ್ ಹಿನ್ನೆಲೆ, ಮಾಂಸದಂಗಡಿಯ ಅರ್ಧ ಬಾಗಿಲು ತೆಗೆದು ಚಿಕನ್ ಮತ್ತು ಮಟನ್ ಮಾರಾಟ ಮಾಡಿದರು. ಇನ್ನು, ಅಂಗಡಿಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಹಾಗೂ ಸ್ಯಾನಿಟೈಸರ್ ಬಳಸದೆ ವ್ಯವಹಾರ ನಡೆಸಲಾಗುತ್ತಿತ್ತು.
ಒಟ್ಟಾರೆ, ಕೊರೊನಾ ವೈರಸ್ ಬಗ್ಗೆ ಸರ್ಕಾರ ಎಷ್ಟೇ ಎಚ್ಚರಿಕೆ ನೀಡಿದರೂ ಜನ ಮಾತ್ರ ಯಾವುದೇ ನಿಯಮ ಪಾಲಿಸುತ್ತಿರಲಿಲ್ಲ.