ETV Bharat / state

ತಂಬಾಕು ಮಾರಾಟ: ನಗರಸಭೆ ಅಧಿಕಾರಿಗಳ ದಾಳಿ, ದಂಡ!

ಶ್ರೀನಿವಾಸ ಜನರಲ್ ಸ್ಟೋರ್ ಮೇಲೆ ದಾಳಿ ಮಾಡಿದ ನಗರಸಭೆಯ ನೈರ್ಮಲ್ಯ ಮತ್ತು ಪರಿಸರ ವಿಭಾಗದ ಅಧಿಕಾರಿಗಳು, ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದುಕೊಂಡರು. ಜೊತೆಗೆ ಅಂಗಡಿ ಮಾಲೀಕ ಶ್ರೀನಿವಾಸ ಗೋಪಾಲ ಶೆಟ್ಟಿಗೆ ಹತ್ತು ಸಾವಿರ ರೂಪಾಯಿ ದಂಡ ಹಾಕಿದರು.

Attack on shops
Attack on shops
author img

By

Published : Jun 13, 2020, 9:31 PM IST

ಗಂಗಾವತಿ: ಲಾಕ್​ ಡೌನ್ ಸಂದರ್ಭದಲ್ಲಿ ನಿಷೇಧಿಸಲ್ಪಟ್ಟಿರುವ ತಂಬಾಕು, ಧೂಮಪಾನದಂತಹ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಬಗ್ಗೆ ಸಾರ್ವಜನಿಕರಿಂದ ಸಿಕ್ಕ ಖಚಿತ ಮಾಹಿತಿ ಮೇರೆಗೆ ನಗರಸಭೆಯ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ಮಾಡಿದರು.

Attack on shops
ಅಂಗಡಿ ಮೇಲೆ ನಗರಸಭೆ ಅಧಿಕಾರಿಗಳಿಂದ ದಾಳಿ

ಮಹಾವೀರ ವೃತ್ತದ ಸಮೀಪ ಇರುವ ಮಲ್ಲಿಕಾರ್ಜುನ್​ ಚಿತ್ರಮಂದಿರದ ಮುಂದಿನ ಶ್ರೀನಿವಾಸ ಜನರಲ್ ಸ್ಟೋರ್ ಮೇಲೆ ದಾಳಿ ಮಾಡಿದ ನಗರಸಭೆಯ ನೈರ್ಮಲ್ಯ ಮತ್ತು ಪರಿಸರ ವಿಭಾಗದ ಅಧಿಕಾರಿಗಳು, ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದುಕೊಂಡರು.

ಬಳಿಕ ಅಂಗಡಿ ಮಾಲೀಕ ಶ್ರೀನಿವಾಸ್​ ಗೋಪಾಲ್​ ಶೆಟ್ಟಿಗೆ ಹತ್ತು ಸಾವಿರ ರೂಪಾಯಿ ದಂಡ ಹಾಕಿದರು. ಅಷ್ಟೇ ಅಲ್ಲದೇ, ಇತರೆ ಚಿಕ್ಕ ಅಂಗಡಿಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳಾದ ದತ್ತಾತ್ರೇಯ ಹೆಗಡೆ, ನಾಗರಾಜ್, ಸ್ವಾತಿ ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.