ETV Bharat / bharat

ಮಾರಾಟವಾಗದ ಟಿಕೆಟ್​ಗೆ ಬಹುಮಾನ: ಪ.ಬಂಗಾಳದಲ್ಲಿ ಲಾಟರಿ ಹಗರಣ, ಇಡಿ ತನಿಖೆ ಚುರುಕು - BENGAL LOTTERY SCAM

ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಬೃಹತ್ ಲಾಟರಿ ಹಗರಣದ ಕುರಿತು ಇಡಿ ತನಿಖೆ ತೀವ್ರಗೊಂಡಿದೆ.

ಇಡಿ
ಇಡಿ (IANS)
author img

By ETV Bharat Karnataka Team

Published : Nov 17, 2024, 1:21 PM IST

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಲಾಟರಿ ಟಿಕೆಟ್ ಮೂಲಕ ಹಣಕಾಸು ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ನಡೆದಿರುವುದು ಇಡಿ ತನಿಖೆಯಲ್ಲಿ ಬಯಲಾಗಿದೆ. ಸದ್ಯ ಇಡಿ ಅಧಿಕಾರಿಗಳು ಪ್ರಕರಣವನ್ನು ಮೂರು ಪ್ರಮುಖ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ತನಿಖೆಯ ಮೊದಲ ಆಯಾಮ ಹೀಗಿದೆ: ಮಾರಾಟವಾಗದ ಟಿಕೆಟ್​ಗೆ ಲಕ್ಕಿ ಡ್ರಾ ಸಿಗುವಂತೆ ಮಾಡುವುದು ಮತ್ತು ಆ ಮೂಲಕ ಜನರನ್ನು ವಂಚಿಸುವುದು. ನಂತರ ನಕಲಿ ವಿಜೇತರನ್ನು ಅಸಲಿ ಎಂದು ಬಿಂಬಿಸಿ ಆ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ನೀಡಲಾಗುತ್ತದೆ. ಈ ಮೂಲಕ ಆಮಿಷ ಒಡ್ಡಿ ಮತ್ತಷ್ಟು ಜನ ಲಾಟರಿ ಟಿಕೆಟ್ ಕೊಳ್ಳುವಂತೆ ಪ್ರಚೋದಿಸಲಾಗುತ್ತದೆ. ಆದರೆ ಮಾರಾಟವಾಗದ ಟಿಕೆಟ್​ಗೆ ಲಕ್ಕಿ ಬಹುಮಾನ ಬರುತ್ತದೆ ಎಂಬುದನ್ನು ತಿಳಿಯದ ಜನತೆ ಹೆಚ್ಚೆಚ್ಚು ಟಿಕೆಟ್​ಗಳನ್ನು ಕೊಂಡು ಮೋಸ ಹೋಗುತ್ತಲೇ ಇರುತ್ತಾರೆ. ಈ ಪ್ರಕ್ರಿಯೆಯಲ್ಲಿ, ಈ ನಿರ್ದಿಷ್ಟ ಲಾಟರಿ ಕಂಪನಿ ಮತ್ತು ಅದರ ಏಜೆಂಟರು ಮುಖ್ಯವಾಗಿ ಅಶಿಕ್ಷಿತ ದುರ್ಬಲ ಆರ್ಥಿಕ ಹಿನ್ನೆಲೆಯ ಜನರನ್ನೇ ಗುರಿಯಾಗಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತನಿಖೆಯ ಎರಡನೇ ಆಯಾಮ ಹೀಗಿದೆ: ಲಕ್ಕಿ ಡ್ರಾನಲ್ಲಿ ವಿಜೇತನೆಂದು ಬಿಂಬಿಸಲಾಗುವ ನಕಲಿ ವ್ಯಕ್ತಿಗೆ ಸಹ ಬಹುಮಾನದ ಪೂರ್ತಿ ಮೊತ್ತವನ್ನು ನೀಡಲಾಗುವುದಿಲ್ಲ. ಲಾಟರಿ ಕಂಪನಿಯು ಆ ವ್ಯಕ್ತಿಗೆ ಬಹುಮಾನದ ಶೇ 5ರಷ್ಟು ಅಥವಾ ಅದಕ್ಕೂ ಕಡಿಮೆ ಹಣ ನೀಡಿ ಉಳಿದ ಹಣವನ್ನು ತಾನೇ ಲಪಟಾಯಿಸುತ್ತದೆ. ಇದು ಅಕ್ರಮ ಹಣ ವರ್ಗಾವಣೆಯ ವಿಶಿಷ್ಟ ಪ್ರಕರಣದ ಅಡಿಯಲ್ಲಿ ಬರುತ್ತದೆ.

ತನಿಖೆಯ ಮೂರನೇ ಆಯಾಮ ಹೀಗಿದೆ: ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಮೂರನೇ ಕೋನವೆಂದರೆ, ಈ ಲಾಟರಿ ಕಂಪನಿಯು ವಂಚನೆಯಿಂದ ಗಳಿಸಿದ ಆದಾಯವನ್ನು ಭಾರತ ಮತ್ತು ವಿದೇಶಗಳಲ್ಲಿ ಹೂಡಿಕೆ ಮಾಡಿರುವುದು ಹಾಗೂ ಈ ಬಗ್ಗೆ ಮಾಹಿತಿ ಕಲೆ ಹಾಕುವುದು. ಇಂಥ ಹೂಡಿಕೆಗಳ ಮೂಲಕ ವಂಚಕ ಲಾಟರಿ ಕಂಪನಿಯು ತನ್ನ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿದೆ ಎಂದು ಮೂಲಗಳು ತಿಳಿಸಿವೆ.

ಆ ಸಮಯದಲ್ಲಿ ನಗರದ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಿಬ್ಬರನ್ನು ಬಂಧಿಸಲಾಯಿತು ಮತ್ತು ಕೆಲ ಬ್ಯಾಂಕ್ ಖಾತೆಗಳನ್ನು ಸಹ ಸ್ಥಗಿತಗೊಳಿಸಲಾಯಿತು. ಆದರೆ ಅಂತಿಮವಾಗಿ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿಲ್ಲ.

ಕಳೆದ ವಾರ, ಇಡಿ ಅಧಿಕಾರಿಗಳು ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಕೆಲ ಸ್ಥಳಗಳಲ್ಲಿ ನಿರಂತರ ದಾಳಿ ಮತ್ತು ಶೋಧ ಕಾರ್ಯಾಚರಣೆಗಳನ್ನು ನಡೆಸಿದರು. ಕೋಲ್ಕತ್ತಾದ ಉತ್ತರ ಹೊರವಲಯದಲ್ಲಿರುವ ಲಾಟರಿ ಮುದ್ರಣಾಲಯದ ಮೇಲೆಯೂ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಜೂನ್ 2019 ರಲ್ಲಿ ಮೊದಲ ಬಾರಿಗೆ, ದಕ್ಷಿಣ ಕೋಲ್ಕತ್ತಾದ ಪೊಲೀಸ್ ಠಾಣೆಯಲ್ಲಿ ಈ ಲಾಟರಿ ಕಂಪನಿಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮಾರಾಟವಾಗದ ಟಿಕೆಟ್ ಗಳ ಮೇಲೆ ಲಕ್ಕಿ ಡ್ರಾಗಳನ್ನು ಡ್ರಾ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ನಿಟ್ಟಿನಲ್ಲಿ, ಇಡಿ ಅಧಿಕಾರಿಗಳು ದಕ್ಷಿಣ ಕೋಲ್ಕತ್ತಾದ ಲೇಕ್ ಮಾರ್ಕೆಟ್ ನಲ್ಲಿರುವ ಈ ಲಾಟರಿ ಕಂಪನಿಯ ಏಜೆಂಟ್​ನ ನಿವಾಸ ಮತ್ತು ಕಚೇರಿಯಿಂದ ಲೆಕ್ಕವಿಲ್ಲದ 3 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದ ಲಾಟರಿ ಹಗರಣ ನಡೆದಿದೆ ಎಂದು ಬಹಳ ಹಿಂದಿನಿಂದಲೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಆರೋಪಿಸುತ್ತಿದ್ದಾರೆ. ಲಾಟರಿ ಹಗರಣದಲ್ಲಿ ಗ್ರಾಮೀಣ ಭಾಗದ ಬಡ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡಿದ್ದಾರೆ ಹಾಗೂ ಈ ಹಗರಣದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನ ಪ್ರಮುಖ ನಾಯಕರು ಫಲಾನುಭವಿಗಳಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ : ಚಳಿಗಾಲ ಆರಂಭ: ಬದರೀನಾಥ ದೇವಾಲಯ ಬಂದ್, ಬೇಸಿಗೆಯಲ್ಲಿ ಮತ್ತೆ ದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.