AI on KL Rahul: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಮೆಗಾ ಹರಾಜು ಪ್ರಕ್ರಿಯೆ ನಡೆಯಲು ಇನ್ನೂ 7 ದಿನಗಳು ಬಾಕಿ ಇದೆ. ಇದಕ್ಕೂ ಮೊದಲೇ ಯಾವ ಆಟಗಾರರನ್ನು ಯಾವ ತಂಡ ಖರೀದಿಸಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಈ ಬಾರಿ ಸ್ಟಾರ್ ಬ್ಯಾಟರ್ ಕೆ.ಎಲ್.ರಾಹುಲ್ ಕೂಡ ಹರಾಜಿನಲ್ಲಿದ್ದು ಯಾವ ತಂಡ ಖರೀದಿಸಲಿದೆ ಎಂಬ ಕುತೂಹಲ ಮೂಡಿದೆ.
ಕೆಲವರು ಈ ಬಾರಿ ರಾಹುಲ್ ಅವರನ್ನು ಆರ್ಸಿಬಿ ಖರೀದಿಸುತ್ತದೆ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವರು ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸುವ ಸಾಧ್ಯತೆ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇವುಗಳ ನಡುವೆ ರಾಹುಲ್ ಅವರನ್ನು ಈ ಬಾರಿ ಯಾವ ತಂಡ ಮತ್ತು ಎಷ್ಟು ಮೊತ್ತಕ್ಕೆ ಖರೀದಿ ಮಾಡಲಿದೆ ಎಂಬ ಪ್ರಶ್ನೆಗೆ ಕೃತಕ ಬುದ್ಧಿಮತ್ತೆ (AI) ಉತ್ತರ ನೀಡಿದೆ.
ಸದ್ಯ 2 ಕೋಟಿ ರೂ ಮೂಲ ಬೆಲೆಯೊಂದಿಗೆ ಐಪಿಎಲ್ ಮೆಗಾ ಹರಾಜಿಗೆ ರಾಹುಲ್ ಎಂಟ್ರಿ ಕೊಟ್ಟಿದ್ದಾರೆ. ಇವರು ಬ್ಯಾಟರ್ ಮತ್ತು ವಿಕೆಟ್ ಕೀಪರ್ ಆಗಿದ್ದು ನಾಯಕನಾಗಿಯೂ ತಂಡ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಅನುಭವಿ ಆಟಗಾರನಾಗಿರುವ ರಾಹುಲ್‌ರನ್ನು ತಮ್ಮ ತಂಡಗಳಿಗೆ ಸೇರಿಸಿಕೊಳ್ಳಬೇಕೆಂದು ಫ್ರಾಂಚೈಸಿಗಳು ಎದುರು ನೋಡುತ್ತಿವೆ. ಇದರ ನಡುವೆ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, 2025ರ ಐಪಿಎಲ್ನಲ್ಲಿ ರಾಹುಲ್ ಅವರನ್ನು ಪಡೆಯಲಿರುವ ತಂಡ ಯಾವುದು ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದೆ.
ಇದನ್ನೂ ಓದಿ: IPLನ ಪ್ರತೀ ಪಂದ್ಯದಿಂದ ಒಬ್ಬ ಆಟಗಾರ ಗಳಿಸುವ ಹಣ ಎಷ್ಟು? ಸಂಪೂರ್ಣ ವಿವರ
AI ಕೊಟ್ಟ ಉತ್ತರ ಇದು: ಮೆಗಾ ಹರಾಜಿನಲ್ಲಿ ರಾಹುಲ್ ಅವರನ್ನು ಖರೀದಿಸಲಿರುವ ತಂಡ ಚೆನ್ನೈ ಸೂಪರ್ ಕಿಂಗ್ಸ್ (CSK) ಎಂದು AI ಹೇಳಿದೆ. ಈ ಬಾರಿ ಚೆನ್ನೈ ತಂಡ ರಾಹುಲ್ ಅವರನ್ನು 14ರಿಂದ 16 ಕೋಟಿ ರೂ. ಕೊಟ್ಟು ಖರೀದಿಸಲಿದೆ ಎಂದು ಅದು ತಿಳಿಸಿದೆ. ಇದಕ್ಕೆ ಕಾರಣ ನೀಡಿರುವ AI, ಸಿಎಸ್ಕೆಗೆ ನಾಯಕ ಮತ್ತು ವಿಕೆಟ್ ಕೀಪರ್ ಅವಶ್ಯಕತೆ ಇರುವ ಕಾರಣ ಸಿಎಸ್ಕೆ ರಾಹುಲ್ ಅವರನ್ನು ಖರೀದಿಸಬಹುದು ಎಂದಿದೆ.
ಈ ಹಿಂದೆ ಐಪಿಎಲ್ 2022 ಮತ್ತು 2023ರಲ್ಲಿ ರಾಹುಲ್ ಎಲ್‌ಎಸ್‌ಜಿಯ ನಾಯಕನಾಗಿ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಐಪಿಎಲ್ ದಾಖಲೆ: ರಾಹುಲ್ ಇದುವರೆಗೆ ಒಟ್ಟು 132 ಐಪಿಎಲ್ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. ಈ ಅವಧಿಯಲ್ಲಿ 4,683 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಮತ್ತು 37 ಅರ್ಧಶತಕ ಸೇರಿದೆ. 132 ರನ್ ಇವರ ಹೈಸ್ಕೋರ್ ಆಗಿದೆ.
ಇದನ್ನೂ ಓದಿ: IPL ಮೆಗಾ ಹರಾಜಿನಲ್ಲಿ 13 ವರ್ಷದ ಬಾಲಕ! ಇವರ ಮೂಲ ಬೆಲೆ 30 ಲಕ್ಷ ರೂಪಾಯಿ