ETV Bharat / state

ಕೋವಿಡ್ ಭಯದಿಂದ ಸಂಬಂಧಿಕರು ಬರ್ಲಿಲ್ಲ; ಮುಸ್ಲಿಂ ಯುವಕರಿಂದ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ - ಮುಸ್ಲಿಂ ಯುವಕರಿಂದ ಮಾನವೀಯ ಕಾರ್ಯ

ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಜಾತಿ, ಧರ್ಮಗಳ ಎಲ್ಲೆ ಮೀರಿ ಒಬ್ಬರಿಗೊಬ್ಬರು ಪರಸ್ಪರ ಸಹಕಾರ ಮಾಡುತ್ತಿದ್ದಾರೆ. ಈ ಮೂಲಕ ಮಾನವೀಯತೆ ದೊಡ್ಡದು ಎಂಬುವುದನ್ನು ಸಾರುತ್ತಿದ್ದಾರೆ. ಕೊಪ್ಪಳದಲ್ಲಿ ಮುಸ್ಲಿಂ ಯುವಕರ ತಂಡವೊಂದು ಮಾನವೀಯ ಕಾರ್ಯ ಮಾಡಿದ್ದು, ಮೃತ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

Muslim Youths Cremated Hindu man in Koppal
ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಿದ ಮುಸ್ಲಿಂ ಯುವಕರು
author img

By

Published : Apr 26, 2021, 11:35 AM IST

ಕೊಪ್ಪಳ: ಉಸಿರಾಟದ ತೊಂದರೆಯಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ಸಂಬಂಧಿಕರು ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕರು ಅಂತ್ಯಕ್ರಿಯೆ ನೆರವೇರಿಸಿದರು.

ಕೊಪ್ಪಳದ ವಿಕಾಸ್ ನಗರದ ವ್ಯಕ್ತಿಯೊಬ್ಬರು ನಿನ್ನೆ ರಾತ್ರಿ ತೀವ್ರ ಉಸಿರಾಟ ಸಮಸ್ಯೆಯಿಂದ ಅಸುನೀಗಿದ್ದರು. ಮೃತನ ಮಗ ಕೂಡ ಕೋವಿಡ್ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಇದ್ದಾರೆ. ಹೀಗಾಗಿ, ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಲು ಜನ ಹಿಂದೇಟು ಹಾಕಿದ್ದಾರೆ. ಈ ವೇಳೆ ಮುಸ್ಲಿಂ ಸಂಘಟನೆ ಹ್ಯೂಮನಿಟೇರಿಯನ್ ರಿಲೀಫ್ ಸೊಸೈಟಿ (ಹೆಚ್​ಆರ್​ಎಸ್​) ಯ ಸದಸ್ಯರು ಅಂತ್ಯಕ್ರಿಯೆ ನೆರವೇರಿಸಿದರು.

ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸಿದ ಮುಸ್ಲಿಂ ಯುವಕರು

ಜಮಾಅತ್ ಅಧ್ಯಕ್ಷ ಸಯ್ಯದ್ ಹಿದಾಯತ್ ಅಲಿ, ತಂಡದ ಮುಖ್ಯಸ್ಥ ಮಹಮ್ಮದ್ ಖಲೀಲ್, ಅಸ್ಗರ್ ಖಾನ್, ಗೌಸ್ ಪಟೇಲ್, ಸಜೀದ್ ಹುಸೇನ್, ರಹಮತ್ ಹುಸೈನ್, ಮಹಮ್ಮದ್ ಅಖೀಲ್ ಈ ಮಾನವೀಯ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಶವವನ್ನು ಸ್ಮಶಾನಕ್ಕೆ ಸಾಗಿಸಲು ಖಾಸಗಿ ಆ್ಯಂಬುಲೆನ್ಸ್​ನವರು ಮೃತನ ಕುಟುಂಬಸ್ಥರಿಂದ ಹೆಚ್ಚಿನ ಹಣ ಸುಲಿಗೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.