ETV Bharat / state

ಬೆಳ್ಳಂಬೆಳಗ್ಗೆ ಲಾಠಿ ಹಿಡಿದು ರೋಡಿಗೆ ಇಳಿದ ಕಮಿಷನರ್

ನಗರದಲ್ಲಿ ಮಾಸ್ಕ್ ಹಾಕದೇ ಓಡಾಡುತ್ತಿರುವ ವಾಹನ ಸವಾರರು ಹಾಗೂ ಪಾದಚಾರಿಗಳನ್ನು ಹಿಡಿದ ನಗರಸಭೆಯ ಸಿಬ್ಬಂದಿ ಆರೋಗ್ಯ ನಿರೀಕ್ಷಕ ನಾಗರಾಜ್ ನೇತೃತ್ವದಲ್ಲಿ ತಲಾ ಇನ್ನೂರು ರೂಪಾಯಿ ದಂಡ ಹಾಕಿದರು.

Municipal Commissioner who fined to people who not wearing mask
ಬೆಳ್ಳಂಬೆಳಗ್ಗೆ ಲಾಠಿ ಹಿಡಿದು ರೋಡಿಗೆ ಇಳಿದ ಕಮಿಷನರ್
author img

By

Published : May 7, 2020, 9:43 AM IST

ಗಂಗಾವತಿ: ಇಲ್ಲಿನ ನಗರಸಭೆಯ ಕಮಿಷನರ್ ಕೆ.ಸಿ. ಗಂಗಾಧರ್ ಹಾಗೂ ಸಿಬ್ಬಂದಿ ಬೆಳ್ಳಂಬೆಳಗ್ಗೆ ನಗರ ಮಾರುಕಟ್ಟೆಗೆ ಲಾಠಿ ಹಿಡಿದು ಪ್ರವೇಶಿಸಿದರು.

ಸುರಕ್ಷಿತ ವಿಧಾನ ಇಲ್ಲದೇ ಸಂಚರಿಸುತ್ತಿದ್ದ ವಾಹನ ಸವಾರರನ್ನು ಹಿಡಿದು ದಂಡ ಪ್ರಯೋಗ ಮಾಡಿದರು. ಕೊರೊನಾ ವ್ಯಾಪಿಸುವ ಹಿನ್ನೆಲೆ ಮುಂಜಾಗ್ರತಾ ಕ್ರಮ ವಹಿಸಿ ಮಾಸ್ಕ್ ಹಾಕಿಕೊಂಡು ಓಡಾಡಬೇಕು, ಸಾರ್ವಜನಿಕ‌ ಸ್ಥಳಗಳಲ್ಲಿ ಅಗತ್ಯ ವಸ್ತುಗಳ‌ ಖರೀದಿ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮ ಜಾರಿಯಲ್ಲಿದೆ. ಆದರೆ, ನಗರದಲ್ಲಿ ಮಾಸ್ಕ್ ಹಾಕದೇ ಓಡಾಡುತ್ತಿರುವ ವಾಹನ ಸವಾರರು ಹಾಗೂ ಪಾದಚಾರಿಗಳನ್ನು ಹಿಡಿದ ನಗರಸಭೆಯ ಸಿಬ್ಬಂದಿ ಆರೋಗ್ಯ ನಿರೀಕ್ಷಕ ನಾಗರಾಜ್ ನೇತೃತ್ವದಲ್ಲಿ ತಲಾ ಇನ್ನೂರು ರೂಪಾಯಿ ದಂಡ ಹಾಕಿದರು.

ಮಾಸ್ಕ್ ಹಾಕದ ಜನರಿಗೆ ನಗರದಲ್ಲಿ ದಂಡ ವಿಧಿಸುವ ನಿಯಮ ಇಂದಿನಿಂದ ಜಾರಿಯಾಗಿದ್ದು, ಬೆಳಗ್ಗೆ ಐದು ಗಂಟೆಯಿಂದ ಏಳುವರೆ ಅಂದರೆ ಕೇವಲ ಎರಡೂವರೆ ಗಂಟೆಯಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಜನರಿಂದ ದಂಡ ಪಾವತಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.