ETV Bharat / state

ಯಂತ್ರದಿಂದ ನಾಟಿ ಮಾಡಿದರೆ ರೈತರಿಗೆ ಆರ್ಥಿಕ ಹೊರೆ ತಗ್ಗುತ್ತದೆ: ಸಂಸದ ಕರಡಿ ಸಂಗಣ್ಣ

ತಾಲೂಕಿನ ಹಣವಾಳ ಗ್ರಾಮದ ರೈತರ ಹೊಲದಲ್ಲಿ ಹಮ್ಮಿಕೊಳ್ಳಲಾಗಿದ್ದ ಯಂತ್ರದ ಮೂಲಕ ನಾಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ ಸಂಸದ ಕರಡಿ ಸಂಗಣ್ಣ, ಭತ್ತದ ಯಂತ್ರದಿಂದ ನಾಟಿ ಮಾಡಿದರೆ ರೈತರಿಗೆ ಆರ್ಥಿಕ ಹೊರೆ ತಗ್ಗುತ್ತದೆ ಎಂದು ಹೇಳಿದರು.

gangavathi
ಟ್ರಾಕ್ಟರ್ ಚಾಲನೆ ಮಾಡಿದ ಶಾಸಕ
author img

By

Published : Aug 16, 2020, 6:45 PM IST

ಗಂಗಾವತಿ: ಇತ್ತೀಚಿನ ದಿನಗಳಲ್ಲಿ ಭತ್ತದ ಕೃಷಿ ಚಟುವಟಿಕೆ ಕೈಗೊಳ್ಳಲು ಕೂಲಿಗಳ ಕೊರತೆ ಎದುರಾಗಿದ್ದು, ರೈತರಿಗೆ ಸಮಸ್ಯೆಯಾಗಿದೆ. ಇದನ್ನು ನಿವಾರಿಸುವ ಸಂಬಂಧ ಇದೀಗ ಭತ್ತದ ಯಂತ್ರದಿಂದ ನಾಟಿ ಮಾಡಿದರೆ ರೈತರಿಗೆ ಆರ್ಥಿಕ ಹೊರೆ ತಗ್ಗುತ್ತದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ಯಂತ್ರದ ಮೂಲಕ ನಾಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಕೃಷಿ ವಿಜ್ಞಾನ ಕೇಂದ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಹಣವಾಳ ಗ್ರಾಮದ ರೈತರ ಹೊಲದಲ್ಲಿ ಹಮ್ಮಿಕೊಳ್ಳಲಾಗಿದ್ದ ಯಂತ್ರದ ಮೂಲಕ ನಾಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಸಂಸದ ಕರಡಿ ಸಂಗಣ್ಣ ಮಾತನಾಡಿದರು. ನೀರಾವರಿ ಪ್ರದೇಶದಲ್ಲಿನ ಕೃಷಿ ಚಟುವಟಿಕೆಯಲ್ಲಿ ಕೂಲಿಗಳ ಅಗತ್ಯ ಹೆಚ್ಚಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂಲಿಕಾರರ ಕೊರತೆ ಕಂಡು ಬರುತ್ತಿದ್ದು, ರೈತರು ಇಂತಹ ಆಧುನಿಕ ಯಂತ್ರಗಳ ನೆರವು ಪಡೆದುಕೊಂಡರೆ ಕೃಷಿ ಕಾರ್ಯ ಸುಲಭವಾಗಲಿದೆ ಎಂದರು.

20 ಜನ ಕೂಲಿಕಾರರನ್ನು ನಾಟಿ ಕಾರ್ಯಕ್ಕೆ ನಿಯೋಜಿಸಿದರೆ ಒಂದು ದಿನಕ್ಕೆ ಎರಡರಿಂದ ಮೂರು ಎಕರೆ ಮಾತ್ರ ಭತ್ತದ ನಾಟಿ ಮಾಡಬಹುದು. ಆದರೆ ಈ ಯಂತ್ರದ ಮೂಲಕ ದಿನಕ್ಕೆ ಎಂಟು ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡಬಹುದು. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ ಎಂದು ತಿಳಿಸಿದರು.

ಶಾಸಕ ಬಸವರಾಜ ದಢೇಸ್ಗೂರು ಸ್ವತಃ ಟ್ರಾಕ್ಟರ್ ಏರಿ ವಾಹನ ಚಾಲನೆ ಮಾಡುವ ಮೂಲಕ ರೈತರಂತೆ ಭತ್ತ ನಾಟಿ ಮಾಡಿ ಗಮನ ಸೆಳೆದರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳಾದ ಎಂ.ವಿ. ರವಿ, ಮಸ್ತಾನರೆಡ್ಡಿ, ರಾಘವೇಂದ್ರ ಎಲಿಗಾರ ಅವರು ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.