ETV Bharat / state

ಬಸವರಾಜ ರಾಯರಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಲ್ಲ: ಸಚಿವ ಹಾಲಪ್ಪ ಆಚಾರ್ - ಸಚಿವ ಹಾಲಪ್ಪ ಆಚಾರ್ ಹೇಳಿಕೆ

ನಾನು ಸಾರ್ವಜನಿಕ ಜೀವನದಲ್ಲಿದ್ದೇನೆ. ಎಲ್ಲದಕ್ಕೂ ಕಮೆಂಟ್ ಮಾಡುವುದಕ್ಕೆ ನನಗೆ ರಾಜ್ಯದ ನಾಯಕರು ಜವಾಬ್ದಾರಿ ಕೊಟ್ಟಿಲ್ಲ. ರಾಜ್ಯದ ನಾಯಕರು, ಕ್ಷೇತ್ರದ ಜನ ಬೇರೆ ಜವಾಬ್ದಾರಿ ಕೊಟ್ಟಿದ್ದಾರೆ. ಆ ಕೆಲಸ ಮಾಡುತ್ತೇನೆ. ನೀವು ಏನು ಕೇಳಿದರೂ ಆ ವಿಷಯಕ್ಕೆ ನಾನು ನೋ ಕಾಮೆಂಟ್ ಎಂದು ಹಾಲಪ್ಪ ಆಚಾರ್ ಹೇಳಿದರು.

ಸಚಿವ ಹಾಲಪ್ಪ ಆಚಾರ್ ಹೇಳಿಕೆ
ಸಚಿವ ಹಾಲಪ್ಪ ಆಚಾರ್ ಹೇಳಿಕೆ
author img

By

Published : Aug 29, 2021, 7:07 PM IST

ಕೊಪ್ಪಳ: ತಮ್ಮ ಬಗ್ಗೆ ವೈಯಕ್ತಿಕವಾಗಿ ಕೊಂಕು ಮಾತನಾಡಿದ್ದ ಮಾಜಿ ಶಾಸಕ ಬಸವರಾಜ ರಾಯರಡ್ಡಿ ಹೇಳಿಕೆಗೆ ಸಚಿವ ಹಾಲಪ್ಪ ಆಚಾರ್ ನೋ ಕಮೆಂಟ್ ಎಂದಿದ್ದಾರೆ.

ಸಚಿವ ಹಾಲಪ್ಪ ಆಚಾರ್ ಹೇಳಿಕೆ

ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ವಯಕ್ತಿನ ಬದುಕಿನ ಬಗ್ಗೆ ಮಾಜಿ ಸಚಿವ ರಾಯರಡ್ಡಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ವಿಷಯಕ್ಕೆ ನಾನು ಕಾಮೆಂಟ್ ಮಾಡುವುದಿಲ್ಲ. ಕಮೆಂಟ್ ಮಾಡುವ ಅವಶ್ಯಕತೆ ಇಲ್ಲ. ಹಾಗಂತ ನಾನು ಅಸಹಾಯಕನಲ್ಲ. ಸಾರ್ವಜನಿಕ ಬದುಕಲ್ಲಿ ಹೇಗೆ ಇರಬೇಕು, ಹಾಗೆ ಇರುತ್ತೇನೆ. ನಾನು ಆ ವಿಷಯ ಚರ್ಚೆ ಮಾಡುವುದಾಗಲಿ ಅಥವಾ ಆ ವಿಷಯದ ಕುರಿತು ಕಮೆಂಟ್ ಮಾಡುವುದಾಗಲಿ ಮಾಡುವುದಿಲ್ಲ ಎಂದಿದ್ದಾರೆ.

ನಾನು ಸಾರ್ವಾಜನಿಕ ಜೀವನದಲ್ಲಿದ್ದೇನೆ. ಎಲ್ಲದಕ್ಕೂ ಕಮೆಂಟ್ ಮಾಡುವುದಕ್ಕೆ ನನಗೆ ರಾಜ್ಯದ ನಾಯಕರು ಜವಾಬ್ದಾರಿ ಕೊಟ್ಟಿಲ್ಲ. ರಾಜ್ಯದ ನಾಯಕರು, ಕ್ಷೇತ್ರದ ಜನ ಬೇರೆ ಜವಾಬ್ದಾರಿ ಕೊಟ್ಟಿದಾರೆ. ಆ ಕೆಲಸ ಮಾಡುತ್ತೇನೆ. ನೀವು ಏನು ಕೇಳಿದರೂ ಆ ವಿಷಯಕ್ಕೆ ನಾನು ನೋ ಕಾಮೆಂಟ್ ಎಂದು ಹಾಲಪ್ಪ ಆಚಾರ್ ಹೇಳಿದರು.

ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಬಹಳ ಕಡಿಮೆ ಸಮಯದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಇದೀಗ ಸಂತ್ರಸ್ಥೆಗೆ ನ್ಯಾಯ ಸಿಗಬೇಕು. ಕಾನೂನು ಪ್ರಕಾರ ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಎಂದು ಹಾಲಪ್ಪ ಆಚಾರ್ ಹೇಳಿದರು.

ಇದನ್ನೂ ಓದಿ : ರಸ್ತೆ ಅಪಘಾತ: ಗಾಯಾಳುಗಳ ಆಸ್ಪತ್ರೆಗೆ ಸಾಗಿಸಲು ನೆರವಾದ ಸಚಿವ ಸಿ.ಸಿ.ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.