ಕೊಪ್ಪಳ: ಕೊರೊನಾ ಭೀತಿಯಿಂದಾಗಿ ನಿಂತು ಹೋಗಿದ್ದ ಲಕ್ಷ ವೃಕ್ಷೋತ್ಸವ ಕಾರ್ಯಕ್ರಮಕ್ಕೆ ನಾಳೆ ಬೆಳಗ್ಗೆ 9.30 ಗಂಟೆಗೆ ಚಾಲನೆ ಸಿಗಲಿದೆ. ಈ ಮೂಲಕ ಗವಿಮಠದ ನರ್ಸರಿಯಲ್ಲಿ ಬೆಳೆದಿದ್ದ ವಿವಿಧ ಬಗೆಯ ಸಸಿಗಳು ಭೂಮಿಯಲ್ಲಿ ಬೇರೂರಲಿವೆ.
ಡಿಜಿಟಲ್ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಗವಿಮಠ ನೇರ ಪ್ರಸಾರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಾತ್ರೆಯ ಸಂದರ್ಭದಲ್ಲಿ ಪ್ರತಿ ವರ್ಷ ಗವಿಮಠ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಅದರಂತೆ ಈ ವರ್ಷದ ಜಾತ್ರೆಯ ಅಂಗವಾಗಿ ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ, ಕೊರೊನಾ ಕಾರಣದಿಂದ ಈ ಕಾರ್ಯಕ್ರಮ ಸ್ಥಗಿತಗೊಂಡಿತ್ತು.
ಜಿಲ್ಲಾಡಳಿತದ ಸಹಯೋಗದಲ್ಲಿ ಜೂನ್ ತಿಂಗಳಲ್ಲಿ ಹಿರೇಹಳ್ಳದ ದಡದಲ್ಲಿ ಹಾಗೂ ಬೇರೆ ಬೇರೆ ಕಡೆ ಸುಮಾರು 1 ಲಕ್ಷ ಸಸಿಗಳನ್ನು ನೆಡುವುದಕ್ಕೆ ಗವಿಮಠ ಒಂದು ಲಕ್ಷ ವಿವಿಧ ಬಗೆಯ ಸಸಿಗಳನ್ನು ಬೆಳೆಸಿದೆ.