ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಭಯ ಇದೆ. ಆದರೆ ಗುಂಪು ಸೇರುವುದಕ್ಕೆ ಭಯವೇ ಇಲ್ಲ ಅನಿಸುತ್ತೆ. ಸಾಮಾಜಿಕ ಅಂತರದ ಅರಿವು ಕಡಿಮೆಯಾಗುತ್ತಿದೆ.
ಇಲ್ಲಿನ ತಹಶೀಲ್ದಾರ್ ಕಚೇರಿಯ ಎದುರಿಗೆ ಕಾಂಗ್ರೆಸ್ ಪಕ್ಷ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿತ್ತು. ಆದ್ರೆ ಇಲ್ಲಿ ಸಾಮಾಜಿಕ ಅಂತರವೇ ಇರಲಿಲ್ಲ.
ಸೀಮಿತ ಜಾಗೆಯಲ್ಲಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಸೇರಿದಂತೆ ಅಕ್ಕಪಕ್ಕದಲ್ಲಿ ಮಾಸ್ಕ್ ಧರಿಸಿ ಕುಳಿತಿದ್ದರು. ಸಾಮಾಜಿಕ ಅಂತರ ಬಾಯಿಮಾತಾಗಿತ್ತೇ ವಿನಃ ಕಾರ್ಯರೂಪಕ್ಕೆ ಬಂದಿರಲಿಲ್ಲ.