ಕುಷ್ಟಗಿ (ಕೊಪ್ಪಳ): ಜಿಲ್ಲೆಯ ಕುಷ್ಟಗಿ ತಾಲೂಕಿನ ಟೆಂಗುಂಟಿ ಗ್ರಾಮದ ನಿರುಪಯುಕ್ತ ಶುದ್ಧ ನೀರಿನ ಘಟಕಗಳಿಗೆ ಗ್ರಾಮೀಣ ನೀರು ಪೂರೈಕೆ, ನೈರ್ಮಲ್ಯ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ.ಪಿ. ಮಂಜುನಾಥ ಅವರು ಗ್ರಾಪಂ ಪಿಡಿಓ ಅವರೊಂದಿಗೆ ಖುದ್ದಾಗಿ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಪರಿಶೀಲಿಸಿದರು.
ಈಟಿವಿ ಭಾರತದಲ್ಲಿ ಜು. 22ರಂದು ಪ್ರಸಾರವಾದ ವರದಿಗೆ ಸ್ಪಂದಿಸಿದ ಎಇಇ ಮಂಜುನಾಥ ಅವರು, ಪ್ಯಾನ್ ಏಷಿಯಾ ಕಂಪನಿಗೆ ಅಗತ್ಯ ಕ್ರಮಕ್ಕೆ ಸೂಚಿಸಿದ್ದಾರೆ. ಈ ನೀರು ಶುದ್ದೀಕರಣಕ್ಕೆ ಯೋಗ್ಯವೇ ಎನ್ನುವುದನ್ನು ಪರಿಶೀಲಿಸಲು ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಆಧರಿಸಿ ಮುಂದಿನ ಕ್ರಮದ ಭರವಸೆ ನೀಡಿದ್ದಾರೆ.