ಕೊಪ್ಪಳ : ಇಂದು ರಾತ್ರಿ 9 ಗಂಟೆಗೆ ಎಲ್ಲರೂ ದೀಪ ಬೆಳಗಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಜನರು ಹಣತೆಗಳ ಖರೀದಿಯಲ್ಲಿ ತೊಡಗಿದ್ದಾರೆ.
ನಗರದ ಕುಂಬಾರ ಓಣಿಯಲ್ಲಿ ಹಣತೆಗಳನ್ನು ಖರೀದಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಜನ ಖರೀದಿಯಲ್ಲಿ ತೊಡಗಿದ್ದು ಮೋದಿ ಕರೆಯಂತೆ ದೀಪ ಬೆಳಗಿಸಲು ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆ 40 ರೂ. ಒಂದು ಡಜನ್ (12 ದೀಪ ) ದೊಟ್ಟ ದೀಪ ಹಾಗೂ 30 ರೂ. ಡಜನ್‌ನಂತೆ ಸಣ್ಣ ದೀಪಗಳನ್ನ ಮಾರಾಟ ಮಾಡುತ್ತಿದ್ದಾರೆ.