ಕೊಪ್ಪಳ: ರಾಸಲೀಲೆ ಮತ್ತು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾನುವಾರ ಧಾರವಾಡ ಜಿಲ್ಲೆಯಲ್ಲಿ ಆರೋಪಿ ಶಿಕ್ಷಕ ಮಹ್ಮದ್ ಅಜರುದ್ದೀನ್ನನ್ನು ವಶಕ್ಕೆ ಪಡೆಯಲಾಗಿದೆ.
ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಸಿಂಗಾಪೂರ ಗ್ರಾಮದ ಶಿಕ್ಷಕ ಅಜರುದ್ದೀನ್ ನೆರೆಮನೆಯ ಮಹಿಳೆಯರು ಮತ್ತು ಮಕ್ಕಳನ್ನ ಕಾಮದಾಟಕ್ಕೆ ಬಳಸಿಕೊಂಡಿದ್ದ ಎನ್ನುವ ವಿಡಿಯೋ ವೈರಲ್ ಆಗಿದ್ದವು. ಶಿಕ್ಷಕನ ವಿರುದ್ಧ ವಿಡಿಯೋದಲ್ಲಿರುವ ಮಹಿಳೆಯೇ ದೂರು ನೀಡಿದ್ದರು. ಬಳಿಕ ಎಫ್ಐಆರ್ ದಾಖಲಾಗುತ್ತಿದ್ದಂತೆ ಅಜರುದ್ದೀನ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ.
ಕೊಪ್ಪಳದ ಎಸ್ಪಿ ಎ.ಗಿರಿ ಆರೋಪಿ ಶಿಕ್ಷಕನ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದರು. ಪೊಲೀಸರು ಆರೋಪಿಯನ್ನು ಧಾರವಾಡದಿಂದ ಕಾರಟಗಿಗೆ ಕರೆದುಕೊಂಡು ಬರಲಿದ್ದಾರೆ. ರಾಸಲೀಲೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಮೊಹಮ್ಮದ್ ಅಜರುದ್ದೀನ್ನನ್ನು ಅಮಾನತುಗೊಳಿಸಿತ್ತು.
ಇದನ್ನೂ ಓದಿ: ಮಕ್ಕಳು-ಮಹಿಳೆಯರ ಜೊತೆ ಕೊಪ್ಪಳ ಶಿಕ್ಷಕನ ಕಾಮದಾಟದ ವಿಡಿಯೋ ವೈರಲ್.. ಟೀಚರ್ ಎಸ್ಕೇಪ್