ETV Bharat / state

ಬೆಡ್ ಲಭ್ಯತೆಯ ಮಾಹಿತಿಗಾಗಿ ವೆಬ್​ಸೈಟ್ ಆರಂಭಿಸಿದ ಕೊಪ್ಪಳ ಜಿಲ್ಲಾಡಳಿತ - ಕೊರೊನಾ 2ನೇ ಅಲೆ

ಸೋಂಕಿತರು ಬೆಡ್​ಗಾಗಿ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಬೆಡ್​ಗಳ ಲಭ್ಯತೆಯ ಬಗ್ಗೆ ಕೊಪ್ಪಳ ಜಿಲ್ಲಾಡಳಿತ ವೆಬ್​ಸೈಟ್ ಆರಂಭಿಸಿದೆ. ಬೆಡ್​ಗಳ ಲಭ್ಯತೆ ಬಗ್ಗೆ https://Koppal.nic.in/end/covid-19 ವಿಳಾಸದಲ್ಲಿ ವೀಕ್ಷಿಸಬಹುದು‌.

Koppal
ಬೆಡ್ ಲಭ್ಯತೆಯ ಮಾಹಿತಿ ಕುರಿತು ವೆಬ್​ಸೈಟ್ ಆರಂಭಿಸಿದ ಕೊಪ್ಪಳ ಜಿಲ್ಲಾಡಳಿತ
author img

By

Published : May 12, 2021, 11:30 AM IST

ಕೊಪ್ಪಳ: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರು ಬೆಡ್​ಗಾಗಿ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಬೆಡ್​ಗಳ ಲಭ್ಯತೆಯ ಬಗ್ಗೆ ಕೊಪ್ಪಳ ಜಿಲ್ಲಾಡಳಿತ ವೆಬ್​ಸೈಟ್ ಆರಂಭಿಸಿದೆ.

ಬೆಂಗಳೂರು ಮಾದರಿಯಲ್ಲಿ ಕೊಪ್ಪಳದಲ್ಲಿಯೂ ವೆಬ್​ಸೈಟ್ ಆರಂಭಿಸಲಾಗಿದೆ. ಬೆಡ್​ಗಳ ಲಭ್ಯತೆಯ ಕುರಿತಂತೆ https://Koppal.nic.in/end/covid-19 ವಿಳಾಸದಲ್ಲಿ ವೀಕ್ಷಿಸಬಹುದು‌. ಜಿಲ್ಲೆಯಲ್ಲಿ 6 ಸರ್ಕಾರಿ ಆಸ್ಪತ್ರೆಗಳು, 10 ಖಾಸಗಿ ಆಸ್ಪತ್ರೆಗಳು, ನಾಲ್ಕು ಕೊವಿಡ್ ಕೇರ್ ಸೆಂಟರ್​ನಲ್ಲಿನ ಬೆಡ್​ಗಳ ಮಾಹಿತಿ, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಎಲ್ಲಾ ಮಾಹಿತಿ ಈ ವೆಬ್​ಸೈಟ್​​ನಲ್ಲಿ ಲಭ್ಯವಾಗಲಿದೆ. ಸದ್ಯ ಕುಷ್ಟಗಿ ಹಾಗೂ ಯಲಬುರ್ಗಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 8 ಬೆಡ್​ಗಳು ಲಭ್ಯವಿದೆ.

ಇನ್ನು, ಕೊಪ್ಪಳ ಹಾಗೂ ಗಂಗಾವತಿಯಲ್ಲಿ ಫುಲ್ ಆಗಿವೆ. ಸರ್ಕಾರಿ ಆಸ್ಪತ್ರೆಗಳ ಒಟ್ಟು 309 ಹಾಸಿಗೆಗಳಲ್ಲಿ 301 ಹಾಸಿಗೆಗಳು ಭರ್ತಿಯಾಗಿವೆ. ಖಾಸಗಿ ಆಸ್ಪತ್ರೆಗಳಲ್ಲಿನ ಒಟ್ಟು ಲಭ್ಯವಿರುವ 272 ಹಾಸಿಗೆಗಳ ಪೈಕಿ 267 ಹಾಸಿಗೆ ಭರ್ತಿಯಾಗಿ ಐದು ಬೆಡ್​​ಗಳು ಲಭ್ಯವಿವೆ. ಬೆಡ್​ಗಳ ಲಭ್ಯತೆ ಆಗಾಗ ಬದಲಾವಣೆಯಾಗುತ್ತಿರುತ್ತದೆ. ಗವಿಮಠದ ವೃದ್ಧಾಶ್ರಮದಲ್ಲಿ ರೆಡಿ ಮಾಡಲಾಗಿರುವ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ನಿನ್ನೆ ಪ್ರಾರಂಭಿಸಲಾಗಿದೆ.

ಓದಿ: 'ಊಟ ಇಲ್ದೇ ಒದ್ದಾಡ್ತಿದ್ವಿ, ಇಂದಿರಾ ಕ್ಯಾಂಟೀನ್​ನಿಂದ ತುಂಬಾ ಒಳ್ಳೇದಾಗಿದೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.