ETV Bharat / state

ಆಯಾಗಳಿಗೆ ವೇತನ ನೀಡದೆ ಬಿಇಒ ಸತಾಯಿಸುತ್ತಿದ್ದಾರೆ: ಎಂ ಮಹೇಶ್ ಕುಮಾರ್ ಆರೋಪ - supreme court order

ಆಯಾಗಳನ್ನು ಡಿ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಆದೇಶ‌‌ ಮಾಡಿದೆ. ಆದರೆ, ನ್ಯಾಯಾಲಯದ ಆದೇಶವನ್ನು ಶಿಕ್ಷಣ ಇಲಾಖೆ ಪಾಲಿಸುತ್ತಿಲ್ಲ ಎಂದು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಆಯಾಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ ಕುಮಾರ್ ಆರೋಪಿಸಿದ್ರು.

ಆಯಾಗಳಿಗೆ ಸರಿಯಾಗಿ ವೇತನ ನೀಡದೆ ಸುಪ್ರಿಂ ಆದೇಶ ತಳ್ಳಿಹಾಕಿರುವ ಕೊಪ್ಪಳ ಬಿಇಓ
author img

By

Published : Sep 28, 2019, 12:05 PM IST

ಕೊಪ್ಪಳ: ಸುಪ್ರಿಂಕೋರ್ಟ್ ಆದೇಶದಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳ ಆಯಾಗಳಿಗೆ ಪರಿಷ್ಕೃತ ವೇತನವನ್ನು ನೀಡಬೇಕು. ಆದರೆ, ಕೊಪ್ಪಳ ತಾಲೂಕಿನ ಆಯಾಗಳಿಗೆ ಇಲ್ಲಿನ ಬಿಇಒ ಸರಿಯಾಗಿ ವೇತನ ನೀಡದೆ ಸತಾಯಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಆಯಾಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ ಕುಮಾರ್ ಆರೋಪಿಸಿದ್ರು.

ಆಯಾಗಳಿಗೆ ಸರಿಯಾಗಿ ವೇತನ ನೀಡದೆ ಬಿಇಒ ಸತಾಯಿಸುತ್ತಿದ್ದಾರೆ: ಎಂ ಮಹೇಶ್ ಕುಮಾರ್ ಆರೋಪ

ನಗರದ ಮೀಡಿಯಾ ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 40 ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಡಿಮೆ ಸಂಬಳಕ್ಕೆ ಆಯಾಗಳನ್ನು ದುಡಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ನ್ಯಾಯಕ್ಕಾಗಿ ಕೋರ್ಟ್​ ಮೊರೆ ಹೋಗಲಾಗಿತ್ತು. ಸುಪ್ರಿಂಕೋರ್ಟ್ ಕೂಡ ಆಯಾಗಳ ಪರವಾಗಿಯೇ ತೀರ್ಪು ನೀಡಿದೆ. ಆ ನಂತರ ರಾಜ್ಯದ ಎಲ್ಲ ತಾಲೂಕಿನಲ್ಲೂ 6 ನೇ ವೇತನ ಆಯೋಗದ ಪ್ರಕಾರ, ಆಯಾಗಳಿಗೆ ಸಂಬಳ ನೀಡಲಾಗಿದೆ. ಆದರೆ, ಕೊಪ್ಪಳ ತಾಲೂಕಿನಲ್ಲಿರುವ 13 ಜನ ಆಯಾಗಳಿಗೆ ಮಾತ್ರ ಪರಿಷ್ಕೃತ 17 ಸಾವಿರ ರೂಪಾಯಿ ಸಂಬಳ ನೀಡದೆ ಇಲ್ಲಿನ ಬಿಇಓ ಸತಾಯಿಸುತ್ತಿದ್ದಾರೆ ಎಂದು ಅವರು ದೂರಿದ್ರು.

ಅಷ್ಟೇ ಅಲ್ಲದೇ, ಆಯಾಗಳನ್ನು ಡಿ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಆದರೆ, ನ್ಯಾಯಾಲಯದ ಆದೇಶವನ್ನು ಶಿಕ್ಷಣ ಇಲಾಖೆ ಪಾಲಿಸುತ್ತಿಲ್ಲ. 60 ವರ್ಷ ವಯಸ್ಸಾಗಿರುವ ಆಯಾಗಳನ್ನು ಹಾಗೆಯೇ ಕೆಲಸದಿಂದ ರಿಲೀವ್ ಮಾಡಲಾಗುತ್ತಿದೆ. ಇದು ನ್ಯಾಯಾಲಯದ ನಿಂದನೆಯಾಗುತ್ತದೆ ಎಂದು ಎಂ. ಮಹೇಶ್ ಕುಮಾರ್ ಎಚ್ಚರಿಸಿದ್ರು.

Intro:

Body:ಕೊಪ್ಪಳ:- ಸುಪ್ರಿಂ ಕೋರ್ಟ್ ಆದೇಶದಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳ ಆಯಾಗಳಿಗೆ ಪರಿಷ್ಕೃತ ವೇತನವನ್ನು ಕೊಪ್ಪಳ ತಾಲೂಕಿನ ಆಯಾಗಳಿಗೆ ಇಲ್ಲಿನ ಬಿಇಓ ನೀಡದೆ ಸತಾಯಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳ ಆಯಾಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಮಹೇಶಕುಮಾರ್ ಆರೋಪಿಸಿದ್ದಾರೆ. ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 40 ವರ್ಷಗಳಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಡಿಮೆ ಸಂಬಳದಲ್ಲಿ ಆಯಾಗಳನ್ನು ದುಡಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಸುಪ್ರಿಂ ಕೋರ್ಟ್ ಸಹ ಆಯಾಗಳ ಪರವಾಗಿ ತೀರ್ಪು ನೀಡಿ ಸರ್ಕಾರಕ್ಕೆ ಆದೇಶ ಮಾಡಿದೆ. ರಾಜ್ಯದ ಎಲ್ಲ ತಾಲೂಕಿನಲ್ಲಿ 6 ನೇ ವೇತನ ಆಯೋಗದ ಪ್ರಕಾರ ಆಯಾಗಳಿಗೆ ಸಂಬಳ ನೀಡಲಾಗಿದೆ. ಆದರೆ, ಕೊಪ್ಪಳ ತಾಲೂಕಿನಲ್ಲಿರುವ 13 ಜನ ಆಯಾಗಳಿಗೆ ಮಾತ್ರ ಪರಿಷ್ಕೃತ 17 ಸಾವಿರ ರುಪಾಯಿ ಸಂಬಳ ನೀಡದೆ ಇಲ್ಲಿನ ಬಿಇಓ ಅವರು ಸತಾಯಿಸುತ್ತಿದ್ದಾರೆ ಎಂದು ಆಪಾದಿಸಿದರು. 60 ವರ್ಷ ವಯಸ್ಸಾಗಿರುವ ಆಯಾಗಳನ್ನು ಹಾಗೆ ರಿಲೀವ್ ಮಾಡಲಾಗುತ್ತಿದೆ. ಆಯಾಗಳನ್ನು ಡಿ ದರ್ಜೆ ನೌಕರರನ್ನಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ಆದೇಶ‌‌ ಮಾಡಿದೆ. ಆದರೆ, ನ್ಯಾಯಾಲಯದ ಆದೇಶವನ್ನು ಶಿಕ್ಷಣ ಇಲಾಖೆ ಪಾಲನೆ ಮಾಡುತ್ತಿಲ್ಲ. ಇದು ನ್ಯಾಯಾಲಯದ ನಿಂದನೆಯಾಗುತ್ತದೆ ಎಂದು ಎಂ. ಮಹೇಶಕುಮಾರ್ ಹೇಳಿದರು.

ಬೈಟ್1:- ಎಂ. ಮಹೇಶಕುಮಾರ್, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಆಯಾಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.