ETV Bharat / state

ಕಸಾಪ ಕೊಪ್ಪಳ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ರಂಗು ಪಡೆಯುತ್ತಿರುವ ಸಾಹಿತ್ಯದ ಬಣ ರಾಜಕಾರಣ

author img

By

Published : Feb 7, 2021, 7:42 AM IST

Updated : Feb 7, 2021, 8:17 AM IST

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಚಟುವಟಿಕೆಗಳು ಕೊಪ್ಪಳ ಜಿಲ್ಲೆಯಲ್ಲಿ ಜೋರಾಗಿವೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಹೀಗಾಗಿ ಕೊಪ್ಪಳ ಜಿಲ್ಲೆಯಲ್ಲಿ ಸಾಹಿತ್ಯದ ಬಣ ರಾಜಕಾರಣ ರಂಗು ಪಡೆದುಕೊಳ್ಳುತ್ತಿದೆ.

kasapa Koppal District president election
ಕಸಾಪ ಕೊಪ್ಪಳ ಜಿಲ್ಲಾಧ್ಯಕ್ಷ ಚುನಾವಣೆ

ಕೊಪ್ಪಳ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಈಗಾಗಲೇ ಆಕಾಂಕ್ಷಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ಹೀಗಾಗಿ ಕೊಪ್ಪಳ ಜಿಲ್ಲೆಯಲ್ಲಿಯೂ ಚಟುವಟಿಕೆಗಳು ಗರಿಗೆದರಿವೆ.

ಕಸಾಪ ಕೊಪ್ಪಳ ಜಿಲ್ಲಾಧ್ಯಕ್ಷ ಚುನಾವಣೆ

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಾಹಿತ್ಯದ ಹಿನ್ನೆಲೆಯುಳ್ಳ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಒಳಿತು ಎಂಬ ಅಭಿಪ್ರಾಯ ಕೇಳಿಬರುತ್ತಿವೆಯಾದರೂ ಇದು ಅಸಾಧ್ಯದ ಮಾತು ಎಂಬಂತೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಹೀಗಾಗಿ ಜಿಲ್ಲೆಯಲ್ಲಿ ಸಾಹಿತ್ಯದ ಬಣ ರಾಜಕಾರಣ ರಂಗು ಪಡೆದುಕೊಳ್ಳುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಚಟುವಟಿಕೆಗಳು ಕೊಪ್ಪಳ ಜಿಲ್ಲೆಯಲ್ಲಿ ಜೋರಾಗಿ ಸಾಗಿವೆ. 9000 ಕ್ಕೂ ಅಧಿಕ ಮತದಾರರನ್ನು ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಈಗಾಗಲೇ ಅನೇಕ ಆಕಾಂಕ್ಷಿಗಳು ತಯಾರಿ ನಡೆಸಿದ್ದಾರೆ. ಇದರಿಂದಾಗಿ ಒಮ್ಮತದ ಅಭ್ಯರ್ಥಿ ಆಯ್ಕೆ ದೂರದ ಮಾತು ಎಂಬಂತಾಗಿದೆ.

ಕಳೆದ ಚುನಾವಣೆಯ ಸಂದರ್ಭದಲ್ಲಿನ ಕರಾರಿನಂತೆ ಈ ಬಾರಿ ಅಧ್ಯಕ್ಷ ಸ್ಥಾನವನ್ನು ಗಂಗಾವತಿ ಭಾಗಕ್ಕೆ ಬಿಟ್ಟುಕೊಡಬೇಕು. ಹೀಗಾಗಿ ಈ ಬಾರಿ ಶೇಖರಗೌಡ ಬಣದಿಂದ ಗಂಗಾವತಿ ಭಾಗದ ಶಿಕ್ಷಕ ಶರಣೇಗೌಡ ಹಾಗೂ ಪತ್ರಕರ್ತ ರಾಮಮೂರ್ತಿ ನವಲಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇದರ ಜತೆಗೆ ಸಾಹಿತಿಯಾಗಿರುವ ಹಿರಿಯ ಪತ್ರಕರ್ತ ಬಸವರಾಜ ಬಿನ್ನಾಳ ಅವರೂ ಸಹ ಪ್ರಬಲ ಆಕಾಂಕ್ಷಿಯಾಗಿದ್ದು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನು ಈ ಹಿಂದೆ ಇದೇ ಶೇಖರಗೌಡ ಬಣದಲ್ಲಿ ಗುರುತಿಸಿಕೊಂಡಿದ್ದ ಅಮರೇಶ ಮೈಲಾಪುರ ಸಹ ಆಕಾಂಕ್ಷಿಯಾಗಿದ್ದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಅಚ್ಚರಿಪಡಬೇಕಾಗಿಲ್ಲ ಎಂದು ಹೇಳಲಾಗುತ್ತಿದೆ. ಮಾರುತಿ ಐಲಿ ಎಂಬುವರು ಸಹ ಆಕಾಂಕ್ಷಿ ಎನ್ನಲಾಗುತ್ತಿದೆ.

ಇದನ್ನೂ ಓದಿ: ಅಪಹರಣ ಮಾಡಿದ್ದ ನೌಕಾದಳದ ಅಧಿಕಾರಿಯನ್ನ ಜೀವಂತವಾಗಿ ಸುಟ್ಟ ಕಿಡ್ನಾಪರ್ಸ್​

ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಮಹೇಶ ಜೋಶಿ ಬಣದಿಂದ ಕೊಪ್ಪಳ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವೀರಣ್ಣ ನಿಂಗೋಜಿ ಕಣಕ್ಕಿಳಿಯುತ್ತಿದ್ದಾರೆ. ಈಗಾಗಲೇ ಒಂದು ಬಾರಿ ಜಿಲ್ಲಾಧ್ಯಕ್ಷರಾಗಿದ್ದ ವೀರಣ್ಣ ನಿಂಗೋಜಿ ಮತ್ತೊಮ್ಮೆ ಕಣಕ್ಕಿಳಿಯುತ್ತಿದ್ದಾರೆ. ಇವರಿಗೆ ಜಿಲ್ಲೆಯ ಹಿರಿಯ ಅಲ್ಲಮಪ್ರಭು ಬೆಟ್ಟದೂರು ಸೇರಿ ಹಿರಿಯ ಸಾಹಿತಿಗಳ ಒಂದು ಗುಂಪು ಬೆಂಬಲಕ್ಕೆ ನಿಂತಿದೆ. ಈ ಎರಡೂ ಬಣಗಳಲ್ಲದೆ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ಉಪನ್ಯಾಸಕ ಹನುಮಂತಪ್ಪ ಅಂಡಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಇದರಿಂದಾಗಿ ಕೊಪ್ಪಳ ಜಿಲ್ಲೆಯಲ್ಲಿ ಒಮ್ಮತದ ಅಭ್ಯರ್ಥಿಯ ಆಯ್ಕೆ ಮಾಡಬೇಕು ಎಂಬ ಸಾಹಿತ್ಯಾಸಕ್ತರ ಬಯಕೆ ಈಡೇರುವುದು ಅಷ್ಟು ಸುಲಭವಲ್ಲ ಎಂಬ ಮಅತುಗಳು ಸಹ ಇನ್ನೊಂದೆಡೆ ಕೇಳಿಬರುತ್ತಿವೆ. ಶೇಖರಗೌಡ ಬಣದಲ್ಲಿಯೇ ಬಸವರಾಜ ಬಿನ್ನಾಳ, ರಾಮಮೂರ್ತಿ ನವಲಿ ಹಾಗೂ ಶರಣೇಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದು ಶೇಖರಗೌಡ ಬಣಕ್ಕೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಬಹುದಾಗಿದೆ. ಕಳೆದ ಚುನಾವಣೆಯಲ್ಲಿ ರಾಜಶೇಖರ ಅಂಗಡಿ ಕೊಟ್ಟ ಮಾತಿನಂತೆ ತಮ್ಮ ಬಣದಿಂದ ಗಂಗಾವತಿ ಭಾಗದ ಆಕಾಂಕ್ಷಿಗಳಿಗೆ ಮಣೆ ಹಾಕಿದರೆ, ಆಕಾಂಕ್ಷಿಗಳಾಗಿರುವ ಇನ್ನುಳಿದವರು ಬಣದಿಂದ ಹಿಂದೆ ಸರಿದು ಇನ್ನೊಂದು ಬಣಕ್ಕೆ ಬೆಂಬಲಿಸುವ ಸಾಧ್ಯತೆ ದಟ್ಟವಾಗಿದೆ‌ ಎನ್ನಲಾಗಿದೆ. ಹೀಗಾಗಿ ಈ ಬಾರಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ.

Last Updated : Feb 7, 2021, 8:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.