ಕೋಲಾರ: ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಚುನಾವಣಾಧಿಕಾರಿ ಮಾಡಿರುವ ಎಡವಟ್ಟಿನಿಂದ ಕೆಲಕಾಲ ಗೊಂದಲ ಉಂಟಾಗಿ, ಹೈಡ್ರಾಮಾ ನಡೆದಿದೆ.
ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಳಿ ಗ್ರಾಮ ಪಂಚಾಯಿತಿ ಇಪ್ಪತ್ತು ಸದಸ್ಯ ಬಲ ಹೊಂದಿದೆ. ಆದರೆ, ಬಂಗಾರಪೇಟೆ ತಾಲೂಕಿನ ಚುನಾವಣಾಧಿಕಾರಿ ದಿನೇಶ್ ಇಪ್ಪತ್ತು ಬ್ಯಾಲೆಟ್ ಬದಲು ಇಪ್ಪತ್ತೊಂದು ಬ್ಯಾಲಟ್‌ಗಳನ್ನು ನೀಡಿ ಎಡವಟ್ಟು ಮಾಡಿದ್ದಾರೆ. ಇದರಿಂದಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಮುಂದೂಡಲಾಗಿದೆ.
ತಮ್ಮ ಎಡವಟ್ಟು ತಿಳಿಯುತ್ತಿದ್ದಂತೆ ಎದೆನೋವು ಎಂದು ಆಸ್ಪತ್ರೆಗೆ ದಾಖಲಾಗಿ ಹೈಡ್ರಾಮ ಮಾಡಿದ್ದಾರೆ. ಪರಿಣಾಮ ಕ್ಯಾಸಂಬಳಿ ಗ್ರಾಮ ಪಂಚಾಯಿತಿ ಎದುರು ನೂರಾರು ಜನರು ಜಮಾಯಿಸಿದ್ದು, ಕೆಜಿಎಫ್ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.