ಗಂಗಾವತಿ: ತಾಲೂಕಿನ ಬಸವಪಟ್ಟಣದ ರಾಜರಾಜೇಶ್ವರಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಕ್ಕಳು ಮೈ ನವರೇಳಿಸುವ ಸಾಹಸಮಯ ಕರಾಟೆ ಪ್ರದರ್ಶನ ನೀಡಿ ಗಮನ ಸೆಳೆದರು.
ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ರಾಷ್ಟ್ರೀಯಮಟ್ಟದ ಎರಡನೇ ಕರಾಟೆ ಚಾಂಪಿಯನ್ ಶಿಪ್ನಲ್ಲಿ ವಿಜೇತರಾದ ಮಕ್ಕಳಿಗೆ ಬಸವಪಟ್ಟಣದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭಕ್ಕೆ ಬಂದ ಮಕ್ಕಳು ಅಭಿನಂದನೆ ಸ್ವೀಕರಿಸುವುದರ ಜೊತೆಗೆ ಕರಾಟೆ ಪ್ರದರ್ಶನ ನೀಡಿ ಜನರ ಗಮನ ಸೆಳೆದರು. ತರಬೇತುದಾರ ಮಂಜುನಾಥ್ ಮಾರ್ಗದರ್ಶನದಲ್ಲಿ ಮಕ್ಕಳು ಪ್ರದರ್ಶನ ನಡೆಸಿದರು.