ಗಂಗಾವತಿ (ಕೊಪ್ಪಳ): ಐಎಎಸ್ ಶ್ರೇಣಿಯ ಪರೀಕ್ಷಾರ್ಥ ಅಧಿಕಾರಿಯನ್ನು ಗಂಗಾವತಿ ತಹಶೀಲ್ದಾರ್ ಹುದ್ದೆಗೆ ಪೂರ್ಣ ಪ್ರಮಾಣದಲ್ಲಿ ನಿಯೋಜನೆ ಮಾಡಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಆದೇಶಿಸಿದ್ದಾರೆ.

ಸದ್ಯ ಹಾಲಿ ಗಂಗಾವತಿ ತಹಶೀಲ್ದಾರ್ ಹುದ್ದೆಯಲ್ಲಿರುವ ಎಂ.ರೇಣುಕಾ ಅವರನ್ನು ಕಡ್ಡಾಯ ರಜೆ ಮೇಲೆ ಕಳಿಸಲಾಗುತ್ತಿದ್ದು, 2019ನೇ ಸಾಲಿನ ಐಎಎಸ್ ಶ್ರೇಣಿಯ ವರ್ಣಿತ್ ನೆಗಿ ಅವರನ್ನು ಪೂರ್ಣ ಪ್ರಮಾಣದ ತಹಶೀಲ್ದಾರ್ ಹುದ್ದೆಗೆ ನಿಯೋಜಿಸಲಾಗಿದೆ.
ಓದಿ: ರಾಜ್ಯಾದ್ಯಂತ ಕೊರೊನಾ ಲಸಿಕೆ ಅಭಿಯಾನಕ್ಕೆ ಸಿಎಂ ಯಡಿಯೂರಪ್ಪ ಚಾಲನೆ
ಇವರು ಒಟ್ಟು 37 ವಾರಗಳ ಕಾಲ ಕೊಪ್ಪಳ ಜಿಲ್ಲೆಯಲ್ಲಿ ಪರೀಕ್ಷಾರ್ಥ ಅಧಿಕಾರಿಯಾಗಿ ನೇಮಕವಾಗಿದ್ದು, ಈ ಪೈಕಿ ಆರು ವಾರಗಳ ಕಾಲ ಪೂರ್ಣ ಪ್ರಮಾಣದ ತಹಶೀಲ್ದಾರ್ ಹುದ್ದೆ ನಿಭಾಯಿಸಬೇಕಿರುವ ಹಿನ್ನೆಲೆ ಗಂಗಾವತಿ ತಹಶೀಲ್ದಾರ್ ಹುದ್ದೆಗೆ ನಿಯೋಜಿಸಲಾಗಿದೆ.