ETV Bharat / state

ಪತ್ನಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ, ಸಭೆಗೆ ಹಾಜರಾಗುತ್ತಿರುವುದು ಪತಿರಾಯ! - undefined

ಕೊಪ್ಪಳ‌ ಜಿಲ್ಲಾ ಪಂಚಾಯತಿಯ ಉಪಾಧ್ಯಕ್ಷೆ ರತ್ನವ್ವ ನಗರ ಅವರ ಬದಲಾಗಿ ಅವ್ರ ಪತಿಯೇ ಎಲ್ಲಾ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ.

ಕೊಪ್ಪಳ‌ ಜಿಲ್ಲಾ ಪಂಚಾಯ್ತಿ
author img

By

Published : Jun 13, 2019, 4:10 PM IST

Updated : Jun 13, 2019, 4:49 PM IST

ಕೊಪ್ಪಳ: ಪಂಚಾಯತಿಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡಿ, ಮಹಿಳೆಯರೂ ಆಡಳಿತದಲ್ಲಿ ಪಾಲ್ಗೊಳ್ಳುವಂತೆ ಕಾನೂನು ರಚಿಸಿ ಜಾರಿಗೆ ತರಲಾಗಿತ್ತು. ಆದ್ರೆ, ಈ ಕಾನೂನು ಉಲ್ಲಂಘನೆಯಾಗುತ್ತಿದ್ದು, ಬಹುತೇಕ ಕಡೆಗಳಲ್ಲಿ ಮಹಿಳೆಯರ ಅಧಿಕಾರಗಳನ್ನು ಅವರ ಪತಿಯಂದಿರೇ ನಿಭಾಯಿಸುತ್ತಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯತಿ ಇದಕ್ಕೆ ಹೊಸ ಸೇರ್ಪಡೆ.

ಇಲ್ಲಿ ಅಧಿಕಾರ ಹೆಂಡ್ತಿದಾದ್ರೂ ...ದರ್ಬಾರ್ ಮಾತ್ರ ಪತಿರಾಯಂದು..!

ನಗರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಕಚೇರಿಯಲ್ಲಿ ಜಿ.ಪಂ. ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಗೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರತ್ನವ್ವ ನಗರ ಬರಬೇಕಿತ್ತು. ಆದ್ರೆ, ಅವರ ಪತಿ ಭರಮಪ್ಪ ನಗರ ಹಾಜರಾಗಿದ್ದರು. ಈ ಮೂಲಕ ಪತ್ನಿಯ ಅಧಿಕಾರವನ್ನು ಪತಿಯೇ ಚಲಾಯಿಸುತ್ತಿದ್ದಾರೆ. ಭರಮಪ್ಪ ನಗರ ಸಭೆಯಲ್ಲಿ ಹಾಜರಾಗಿದ್ರೂ ಸ್ವತಃ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥ ರೆಡ್ಡಿಯಾಗಲಿ ಅಥವಾ ಅಧಿಕಾರಿಗಳಾಗಲೀ ಯಾರೂ ಆಕ್ಷೇಪಿಸಲಿಲ್ಲ.

ಹಾಗಾಗಿ ಸ್ಥಳೀಯ ಪಂಚಾಯತ್‌ಗಳಲ್ಲಿ ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ತಂದ ಮೀಸಲಾತಿ ವ್ಯವಸ್ಥೆ ಅರ್ಥಕಳೆದುಕೊಳ್ಳುತ್ತಿದೆ.

Intro:Body:ಕೊಪ್ಪಳ:- ಅಧಿಕಾರ ಒಬ್ಬರದು, ಆದರೆ ಅದನ್ನು ಚಲಾಯಿಸುವವರು. ಇದು ಕೊಪ್ಪಳ‌ ಜಿಲ್ಲಾ ಪಂಚಾಯ್ತಿಯ ಕತೆ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆಯ ಪತಿರಾಯನ ದರ್ಬಾರ್ ನಡೆಸುತ್ತಿದ್ದಾನೆ. ಹೌದು, ಇಂದು ನಗರದ
ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಕಚೇರಿಯಲ್ಲಿ ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಗೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ರತ್ನವ್ವ ನಗರ ಅವರ ಬದಲಾಗಿ ಪತಿ ಭರಮಪ್ಪ ನಗರ ಹಾಜರ್ ಆಗಿದ್ದರು. ಈ ಮೂಲಕ ಪತ್ನಿಯ ಅಧಿಕಾರವನ್ನು ಪತಿರಾಯ ಚಲಾಯಿಸುತ್ತಿದ್ದಾರೆ. ಭರಮಪ್ಪ ನಗರ ಸಭೆಯಲ್ಲಿ ಹಾಜರ್ ಆದರೂ ಸ್ವತಃ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥರೆಡ್ಡಿಯಾಗಲಿ ಅಥವಾ ಅಧಿಕಾರಿಗಳಾಗಲಿ ಆಕ್ಷೇಪಿಸದೆ ಇರೋದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.Conclusion:
Last Updated : Jun 13, 2019, 4:49 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.