ಗಂಗಾವತಿ : ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದರೆ ಹೆದರುವ ಅಗತ್ಯವಿಲ್ಲದೇ ಮನೆಯಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಮಾಡಿಕೊಳ್ಳಬಹುದು ಎಂದು ವೈದ್ಯರು ಕೆಲ ಮಾತ್ರೆ ಹಾಗೂ ಗಂಟಲಲ್ಲಿ ಹಾಕಿ ಮುಕ್ಕಳಿಸುವ ದ್ರಾವಣಗಳ ಬಗ್ಗೆ ಸಲಹೆ ಕೊಡುತ್ತಿದ್ದಾರೆ.
ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಬ್ಯಾಟಾಡಿನ್ ಲಿಕ್ವಿಡ್, ವಿಟಾಮಿನ್-ಸಿ (ಲಿಮ್ಸಿ), ವಿಟಾಮಿನ್-ಡಿ, ವಿಟಾಮಿನ್-ಇ ಮಾತ್ರೆ, ಡೋಲೊ 650 ಹಾಗೂ ವೇಪರ್ ಕ್ಯಾಪ್ಸೂಲ್ಗಳು ಇರಲಿ ಎಂದು ವೈದ್ಯರು ಸಲಹೆ ಮಾಡುತ್ತಿದ್ದಾರೆ.
ಆದರೆ, ಸ್ಥಳೀಯ ಮಾರುಕಟ್ಟೆಯಲ್ಲಿ ಯಾವ ಔಷಧಿ ಅಂಗಡಿಗಳಲ್ಲೂ ವಿಟಾಮಿನ್ ಸಿ, ವಿಟಾಮಿನ್ ಡಿ ಮತ್ತು ಇ ಸೇರಿದಂತೆ ವೇಪರ್ ಕ್ಯಾಪ್ಸೂಲ್ಗಳು ಸಿಕ್ಕುತ್ತಿಲ್ಲ. ಸಿಕ್ಕರೂ ಎಂಆರ್ಪಿ ಬೆಲೆಗಿಂತ ಎರಡು ಮೂರು ಪಟ್ಟು ಹೆಚ್ಚಿಗೆ ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ.
ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಕಂಪನಿಗಳು ಇದೀಗ ಕಾಂಬಿನೇಷನ್ ಸೂತ್ರ ಎಂಬಂತೆ, ವಿಟಾಮಿನ್ ಸಿ, ವಿಡಾಮಿನ್ ಡಿ ಮತ್ತು ವಿಟಾಮಿನ್ ಇ ಒಳಗೊಂಡ ಮಾತ್ರೆಗಳ ಸಂಯುಕ್ತ ಮಿಶ್ರಣದ ಮಾತ್ರೆಗಳನ್ನು ಮಾರುಕಟ್ಟೆಗೆ ತಂದಿವೆ. ಬೆಲೆ ಕೇಳಿಯೇ ಗ್ರಾಹಕರು ಬೆಚ್ಚಿ ಬೀಳುತ್ತಿದ್ದಾರೆ.