ETV Bharat / state

ಸಿದ್ಧ ಸಮವಸ್ತ್ರ ನೀಡದ ಸರ್ಕಾರ; ಕೊಪ್ಪಳದ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿ ಎತ್ತಿಹಿಡಿದ ಹೈಕೋರ್ಟ್ - ಈಟಿವಿ ಭಾರತ ಕನ್ನಡ

ಶಾಲಾ ಮಕ್ಕಳಿಗೆ ಸಿದ್ಧ ಸಮವಸ್ತ್ರ ಒದಗಿಸದ ಸರ್ಕಾರ- ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ಎತ್ತಿಹಿಡಿದ ಹೈಕೋರ್ಟ್​- ಸಮವಸ್ತ್ರ ನೀಡದ ಸರ್ಕಾರಕ್ಕೆ ಛೀಮಾರಿ ಹಾಕಿದ ನ್ಯಾಯಮೂರ್ತಿಗಳು- ಎಚ್ಚೆತ್ತುಕೊಂಡ ಸರ್ಕಾರ

student
ಶಾಲಾ ಮಕ್ಕಳಿಗೆ ಸಿದ್ದ ಸಮವಸ್ತ್ರ ನೀಡದ ಸರ್ಕಾರ
author img

By

Published : Feb 4, 2023, 9:23 AM IST

Updated : Feb 4, 2023, 9:36 AM IST

ಶಾಲಾ ಮಕ್ಕಳಿಗೆ ಸಿದ್ಧ ಸಮವಸ್ತ್ರ ನೀಡದ ಸರ್ಕಾರ; ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿ ಎತ್ತಿಹಿಡಿದ ಹೈಕೋರ್ಟ್

ಕೊಪ್ಪಳ: ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ವರ್ಷಕ್ಕೆ 2 ಜೊತೆ ಸಿದ್ಧವಾಗಿರುವ ಸಮವಸ್ತ್ರ ನೀಡಬೇಕು. ಆದರೆ ಸರ್ಕಾರ ಸಿದ್ಧ ಸಮವಸ್ತ್ರ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೊಬ್ಬ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಸಮವಸ್ತ್ರ ನೀಡದ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಮಂಜುನಾಥನಿಗೆ 2018 ರಲ್ಲಿ ಸರ್ಕಾರದಿಂದ ಸಮವಸ್ತ್ರ ಬಟ್ಟೆ ನೀಡಿದ್ದರು. ಆದರೆ ಸರ್ಕಾರದಿಂದ ಶಾಲಾ ಮಕ್ಕಳಿಗೆ ಸಿದ್ಧವಾಗಿರುವ ಸಮವಸ್ತ್ರ ನೀಡಬೇಕೆಂಬ ಆದೇಶವಿತ್ತು. ಆದರೆ, ಆತನ ಶಾಲೆಯಲ್ಲಿ ಕೇವಲ ಬಟ್ಟೆ ನೀಡಿದ್ದರಿಂದ ಅದನ್ನು ತಿರಸ್ಕರಿಸಿ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ.

2018ರಲ್ಲಿ ಅರ್ಜಿ ಸಲ್ಲಿಸಿದ್ದ ಮಂಜುನಾಥ: ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ವರ್ಷಕ್ಕೆ 2 ಜೊತೆ ಸಮವಸ್ತ್ರವನ್ನು ಸಿದ್ದಪಡಿಸಿ ನೀಡಬೇಕಾಗಿತ್ತು. ಆದರೆ ಕೆಲವು ಕಾರಣಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಕೇವಲ ಬಟ್ಟೆಗಳನ್ನು ಮಾತ್ರ ನೀಡಲಾಗಿದೆ. ಇದರಿಂದಾಗಿ ಬಡ ಮಕ್ಕಳಿಗೆ ಬಟ್ಟೆ ಹೊಲಿಸಿಕೊಳ್ಳಲು ಪಾಲಕರಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಹೈಕೋರ್ಟ್​ಗೆ 2018 ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮಂಜುನಾಥ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡದೆ ಇರುವುದಕ್ಕೆ ಸರ್ಕಾರಕ್ಕೆ ಛೀಮಾರಿ ಹಾಕಿದ್ದು, ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗು ಶೂಗಳನ್ನು ನೀಡಬೇಕೆಂದು ಮದ್ಯಂತರ ತೀರ್ಪು ನೀಡಿದೆ.

ಇದನ್ನೂ ಓದಿ: ಶಾಲಾ ಮಕ್ಕಳಿಗೆ ಸಮವಸ್ತ್ರ ಪೂರೈಸುವ ಪರಿಜ್ಞಾನವಿಲ್ಲ, ಧಮ್ಮು ತಾಕತ್ತಿನ ಭಾಷಣ ಮಾಡುವ ಸಿಎಂ: ಜೆಡಿಎಸ್

ಸರ್ಕಾರದ ಸೂಚನೆ ಪಾಲಿಸದ ಇಲಾಖೆ: 1 ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸಿದ್ಧಪಡಿಸಿದ ಸಮವಸ್ತ್ರಗಳನ್ನು ನೀಡಬೇಕು. ಆದರೆ ಶಾಲೆ ಆರಂಭದಲ್ಲಿ ಮೊದಲು ಒಂದು ಜೊತೆ ಸಮವಸ್ತ್ರದ ಬಟ್ಟೆಗಳನ್ನು ನೀಡಲಾಗಿದೆ. ಎರಡನೆಯ ಅವಧಿಗೆ ಶಾಲಾ ಹಂತದಲ್ಲಿಯೇ ಬಟ್ಟೆ ಖರೀದಿಸಿ ನೀಡಲು ಸೂಚನೆ ಇದೆ. ಆದರೆ 2019-20, 20-21 ಹಾಗೂ 21-22 ರಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಿಲ್ಲ. ಈ ಮಧ್ಯೆ ಈ ವರ್ಷ 2 ಜೊತೆ ಸಮವಸ್ತ್ರ ಬಟ್ಟೆಗಳನ್ನು ನೀಡಿದ್ದಾರೆ. ಹೀಗೆ ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುತ್ತಿದೆ. ಒಂದು ಜೊತೆ ಬಟ್ಟೆಯನ್ನು ಟೆಂಡರಿನಲ್ಲಿ ಖರೀದಿಸಿದ್ದನ್ನು ಹೇಳುತ್ತಿದೆ. ಆದರೆ ಎರಡನೆಯ ಜೊತೆ ಬಟ್ಟೆಯನ್ನು ಯಾವ ಇಲಾಖೆಯಿಂದ ನೀಡಲಾಗಿದೆ ಎಂಬ ಮಾಹಿತಿ ಇಲ್ಲವಾಗಿದೆ.

ಸರ್ಕಾರ ವಿವಿಧ ಯೋಜನೆಗಳನ್ನು ಜಾರಿ ಮಾಡಿ ಹಣ ಸುರಿಯುತ್ತದೆ. ಆದರೆ ಶಾಲಾ ಮಕ್ಕಳಿಗೆ ಬಟ್ಟೆ ಕೊಡುವಲ್ಲಿ ಮೀನಾಮೇಶ ಎಣಿಸುತ್ತಿರುವುದು ಪಾಲಕರಲ್ಲಿ ಅಸಮಾಧಾನ ಮೂಡಿಸಿದೆ. ಒಂದೆಡೆ ಎಲ್ಲರಿಗೂ ಸಿದ್ಧ ಸಮವಸ್ತ್ರ ನೀಡಬೇಕೆಂದು ಹೇಳಿದ್ದಾರೆ. ಅಲ್ಲದೇ ಸಿದ್ಧ ಸಮವಸ್ತ್ರ ನೀಡುವವರೆಗೂ ಶಾಲೆಯಲ್ಲಿ ನೀಡುವ ಸಮವಸ್ತ್ರ ನನಗೆ ಬೇಡ ಎಂದು ಕೊಪ್ಪಳದ ವಿದ್ಯಾರ್ಥಿ ಮಂಜುನಾಥ ತಿರಸ್ಕರಿಸಿದ್ದಾನೆ. ಈ ಕುರಿತು ಸರ್ಕಾರದ ಮುಂದಿನ ಕ್ರಮದ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಕಳಪೆ ಶೂ ವಿತರಣೆ ಆರೋಪ.. ಮುಖ್ಯೋಪಾಧ್ಯಾಯರು ನಡೆಸಿದ್ದಾರಾ ಕಮಿಷನ್​ ದಂಧೆ ?

Last Updated : Feb 4, 2023, 9:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.