ETV Bharat / state

ಹೆರಿಗೆ, ಋತುಚಕ್ರದ ವೇಳೆ ಪ್ರತ್ಯೇಕ ವಾಸ: ಕೊಪ್ಪಳದಲ್ಲೂ ಇನ್ನೂ ಜೀವಂತ ಈ ಅನಿಷ್ಠ ಪದ್ಧತಿ!

ಜಿಲ್ಲಾ ಕೇಂದ್ರ ಕೊಪ್ಪಳ ನಗರದ ಸಜ್ಜಿಹೊಲ ಎಂಬ ಒಂದು ಪ್ರದೇಶದಲ್ಲಿ ಹಕ್ಕಿಪಿಕ್ಕಿ ಜನಾಂಗದ ಅನೇಕ ಕುಟುಂಬಗಳು ವಾಸ ಮಾಡುತ್ತಿದೆ. ಹೆರಿಗೆಯಾದ ಮತ್ತು ಋತುಚಕ್ರವಾದ ಸಂದರ್ಭದಲ್ಲಿ ಈ ಕುಟುಂಬದ ಮಹಿಳೆಯರು ಪ್ರತ್ಯೇಕವಾಗಿ ಗುಡಿಸಲಲ್ಲಿ ವಾಸಮಾಡುವ ಅನಿಷ್ಠ ಪದ್ಧತಿ ಆಚರಣೆಯಲ್ಲಿದೆ.

author img

By

Published : Feb 7, 2019, 3:31 PM IST

ಅನಿಷ್ಠ ಪದ್ಧತಿ

ಕೊಪ್ಪಳ: ನಾವು ಅಧುನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ ನಮ್ಮಲ್ಲಿನ ಮೂಢನಂಬಿಕೆಗಳನ್ನು ಜೀವಂತವಾಗಿಡಲಾಗುತ್ತಿದೆ. ಅನೇಕ ಅನಿಷ್ಠ ಪದ್ಧತಿಗಳಿಂದ ಜನರು ಇನ್ನೂ ಹೊರಬಂದಿಲ್ಲ ಅನ್ನೋದಕ್ಕೆ ಜಿಲ್ಲೆಯಲ್ಲಿ ಸದ್ದಿಲ್ಲದೆ ಆಚರಣೆಯಲ್ಲಿರುವ ಈ ಪದ್ಧತಿ ಉದಾಹರಣೆಯಾಗಿದೆ.

ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಸಜ್ಜಿಹೊಲ ಎಂಬ ಒಂದು ಪ್ರದೇಶವಿದೆ. ಈ ಪ್ರದೇಶದಲ್ಲಿ ಹಕ್ಕಿಪಿಕ್ಕಿ ಜನಾಂಗದ ಅನೇಕ ಕುಟುಂಬಗಳು ವಾಸ ಮಾಡುತ್ತಿದೆ. ಈ ಹಕ್ಕಿಪಿಕ್ಕಿ ಜನಾಂಗದ ಅನಿಷ್ಠ ಆಚರಣೆಗಳು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡುತ್ತಿವೆ.

ಅನಿಷ್ಠ ಪದ್ಧತಿ
undefined

ಈ ಕುಟುಂಬದ ಮಹಿಳೆಯರು ಋತುಚಕ್ರದ ಸಂದರ್ಭದಲ್ಲಿ ತಮ್ಮ ಮನೆಯಿಂದ ಹೊರಗೆ ಇರಬೇಕು. ಹೆರಿಗೆಯಾದರೂ ಸಹ ಮನೆಯಿಂದ ಹೊರಗೆ ಇರಬೇಕು ಎಂಬ ಅನಿಷ್ಠ ಪದ್ಧತಿ ಇನ್ನೂ ಅಲ್ಲಿ ಆಚರಣೆಯಲ್ಲಿದೆಯಂತೆ. ಈ ಸಂದರ್ಭದಲ್ಲಿ ಮಹಿಳೆಯರು ಪ್ರತ್ಯೇಕವಾಗಿ ವಾಸ ಮಾಡಲು ಒಂದು ಗುಡಿಸಲು ಹಾಕಲಾಗಿರುತ್ತದೆ. ಹೆರಿಗೆಯಾದ ಮತ್ತು ಋತುಚಕ್ರವಾದ ಸಂದರ್ಭದಲ್ಲಿ ಅವರನ್ನು ಯಾರೂ ಮುಟ್ಟುವ ಹಾಗಿಲ್ಲವಂತೆ. ಹೀಗಾಗಿ, ಆ ಮಹಿಳೆಯರು ಒಳಗೊಳಗೆ ಸಂಕಟ ಅನುಭವಿಸುತ್ತಿದ್ದಾರೆ. ಹೇಳಿಕೊಂಡರೆ ಎಲ್ಲಿ ಮನೆಯವರ ವಿರೋಧ, ಆಚರಣೆಗೆ ಧಕ್ಕೆ ಬರುತ್ತದೆ ಎಂಬ ಭಯದಿಂದ ಯಾರಲ್ಲಿಯೂ ಹೇಳಿಕೊಳ್ಳುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ದಾವಣಗೆರೆ ಭಾಗದಲ್ಲಿ ಕಂಡು ಬರುತ್ತಿದ್ದ ಇಂತಹ ಪದ್ಧತಿ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿಯೂ ಸದ್ದಿಲ್ಲದೆ ಅಸ್ತಿತ್ವದಲ್ಲಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಇದರಿಂದ ಬೇಯುತ್ತಿರುವ ಆ ಸಮುದಾಯದ ಮಹಿಳೆಯರನ್ನು ಹೊರ ತರಬೇಕಿದೆ ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.