ETV Bharat / state

ಶೇ.90ರಷ್ಟು ಸಾವುಗಳು ಹೆಡ್ ಇಂಜೂರಿಯಿಂದ ಸಂಭವಿಸುತ್ತವೆ: ಡಿವೈಎಸ್​​ಪಿ ರುದ್ರೇಶ್

author img

By

Published : Jan 19, 2021, 7:38 AM IST

ಹೆಲ್ಮೆಟ್​ ರಹಿತ ಬೈಕ್​ ಸವಾರಿಯಿಂದಾಗುವ ಮರಣಗಳನ್ನು ತಪ್ಪಿಸಲು ಹೆಲ್ಮೆಟ್​ ಜಾಗೃತಿ ಮೂಡಿಸಲಾಗುತ್ತಿದೆ. ಸವಾರರು ಕಾಟಾಚಾರಕ್ಕೆ ಹೆಲ್ಮೆಟ್​ ಧರಿಸದೇ, ನಿಮ್ಮ ಕುಟುಂಬಗಳ ಮೇಲಿನ ಕಾಳಜಿಯಿಂದ ಧರಿಸಿರಿ ಎಂದು ಡಿವೈಎಸ್​​ಪಿ ರುದ್ರೇಶ್ ಉಜ್ಜನಕೊಪ್ಪ ಕಿವಿಮಾತು ಹೇಳಿದರು.

helmet-awareness-campaign-at-kushtagi
ಹೆಲ್ಮೆಟ್​ ಜಾಗೃತಿ ಅಭಿಯಾನ

ಕುಷ್ಟಗಿ (ಕೊಪ್ಪಳ): ಶೇ.90ರಷ್ಟು ಬೈಕ್​​ ಅಪಘಾತ ಸಾವುಗಳು ಹೆಡ್ ಇಂಜೂರಿಯಿಂದ ಸಂಭವಿಸುತ್ತವೆ ಎಂಬುದನ್ನು ಬೈಕ್​ ಸವಾರರು ಅರಿತುಕೊಳ್ಳಬೇಕೆಂದು ಗಂಗಾವತಿ ಉಪ ವಿಭಾಗದ ಡಿವೈಎಸ್​​ಪಿ ರುದ್ರೇಶ್ ಉಜ್ಜನಕೊಪ್ಪ ಹೇಳಿದರು.

ಹೆಲ್ಮೆಟ್​ ಜಾಗೃತಿ ಅಭಿಯಾನ

ಕುಷ್ಟಗಿಯಲ್ಲಿ ಪೊಲೀಸ್​ ಇಲಾಖೆ ಆಯೋಜಿಸಿದ್ದ ಹೆಲ್ಮೆಟ್​ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಲ್ಮೆಟ್​ ರಹಿತ ಬೈಕ್​ ಸವಾರಿಯಿಂದಾಗುವ ಮರಣಗಳನ್ನು ತಪ್ಪಿಸಲು ಹೆಲ್ಮೆಟ್​ ಜಾಗೃತಿ ಮೂಡಿಸಲಾಗುತ್ತಿದೆ. ಬೈಕ್ ಸವಾರರು ಪೊಲೀಸರ ದಂಡದ ಭಯದಿಂದ ಕಾಟಾಚಾರಕ್ಕೆ ಹೆಲ್ಮೆಟ್​ ಧರಿಸುತ್ತಿದ್ದಾರೆ. ಸವಾರರು ಕಾಟಾಚಾರಕ್ಕೆ ಹೆಲ್ಮೆಟ್​ ಧರಿಸದೇ, ನಿಮ್ಮ ಕುಟುಂಬಗಳ ಮೇಲಿನ ಕಾಳಜಿಯಿಂದ ಧರಿಸಿರಿ ಎಂದು ಕಿವಿಮಾತು ಹೇಳಿದರು.

ಇನ್ಮುಂದೆ, ಬೈಕ್ ಸವಾರರು ಹೆಲ್ಮೆಟ್​ ಧರಿಸದೇ ಇದ್ದರೆ 500 ರೂ. ದಂಡ ಹಾಕಲಾಗುವುದು. ಹಿಂಬದಿ ಸವಾರರಿಗೂ ಇದೇ ನಿಯಮ ಅನ್ವಯವಾಗಲಿದೆ. ಯಾವುದೇ ಕಾರಣಕ್ಕೂ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸಬೇಡಿ. ಇತ್ತೀಚೆಗೆ ಸಿಐಟಿಯು ಪ್ರತಿಭಟನೆ ವೇಳೆ ಟ್ರ್ಯಾಕ್ಟರ್​ ಪಲ್ಟಿಯಾಗಿ ನಾಲ್ವರು ಸಾವನ್ನಪ್ಪಿದ್ದರು. ಲೈಸೆನ್ಸ್ ಇಲ್ಲದ ಕಾರಣ ಟ್ರ್ಯಾಕ್ಟರ್​ ಮಾಲೀಕ 8 ಎಕರೆ ಜಮೀನು ಮಾರಬೇಕಾಯಿತು ಎಂದರು.

ಇದಕ್ಕೂ ಮುನ್ನ ಪೊಲೀಸರು ಹೆಲ್ಮೆಟ್ ಧರಿಸಿ ಕುಷ್ಟಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.