New Recharge Plan Reduced By Airtel: ಕೆಲ ದಿನಗಳ ಹಿಂದೆ ಟ್ರಾಯ್ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ವಾಯ್ಸ್ ಕಾಲ್ ಮತ್ತು ಎಸ್ಎಮ್ಎಸ್ ಮಾತ್ರ ರೀಚಾರ್ಜ್ ಪ್ಲಾನ್ಗಳನ್ನು ನೀಡುವಂತೆ ಆದೇಶಿಸಿತ್ತು. ಇದರ ಮುಖ್ಯ ಉದ್ದೇಶ ಈ ಪ್ಲಾನ್ ಮೂಲಕ ಡೇಟಾವನ್ನು ಬಳಸದ ಗ್ರಾಹಕರು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. ಟ್ರಾಯ್ನ ಈ ಆದೇಶದ ನಂತರ ಏರ್‌ಟೆಲ್, ಜಿಯೋ ಮತ್ತು ವೋಡಾಫೋನ್-ಐಡಿಯಾ ತಮ್ಮ ಬಳಕೆದಾರರಿಗೆ ವಾಯ್ಸ್ ಕಾಲ್ಸ್ ಮತ್ತು ಎಸ್ಎಮ್ಎಸ್ ರೀಚಾರ್ಜ್ ಪ್ಲಾನ್ಗಳನ್ನು ಘೋಷಿಸಿದವು.
ಟ್ರಾಯ್ನ ಆದೇಶಕ್ಕೆ ತಲೆ ಬಾಗಿದ ಏರ್‌ಟೆಲ್ ಸಹ ತನ್ನ ಬಳಕೆದಾರರಿಗಾಗಿ ಎರಡು ಹೊಸ ರೀಚಾರ್ಜ್ ಪ್ಲಾನ್ಗಳನ್ನು ಪರಿಚಯಿಸಿತ್ತು. ಆದರೆ ಈಗ ಏರ್‌ಟೆಲ್ ಈ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಏರ್‌ಟೆಲ್‌ನ 469 ರೂ. ಪ್ಲಾನ್: ಏರ್‌ಟೆಲ್ ತನ್ನ 499 ರೂ. ಪ್ಲಾನ್ನ ಬೆಲೆಯನ್ನು 469 ರೂ.ಗಳಿಗೆ ಇಳಿಸಿದೆ. ಏರ್‌ಟೆಲ್ ಈ ಪ್ಲಾನ್ನಲ್ಲಿ 30 ರೂಪಾಯಿಗಳಷ್ಟು ಕಡಿತಗೊಳಿಸಿದೆ. ಈ ಪ್ಲಾನ್ನಲ್ಲಿ ಬಳಕೆದಾರರು 84 ದಿನಗಳ ಸಿಂಧುತ್ವ, ಅನ್ಲಿಮಿಟೆಡ್ ಕಾಲ್ಸ್ ಮತ್ತು 900 ಉಚಿತ ಎಸ್ಎಮ್ಎಸ್ಗಳ ಲಾಭವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಡೇಟಾದ ಪ್ರಯೋಜನ ಸಿಗುವುದಿಲ್ಲ. ಆದ್ರೆ ಈ ಯೋಜನೆಯೊಂದಿಗೆ ಬಳಕೆದಾರರು ಅಪೊಲೊ 24/7 ಸರ್ಕಲ್ ಮೆಂಬರ್ಶಿಪ್ ಮತ್ತು 3 ತಿಂಗಳವರೆಗೆ ಉಚಿತ ಹಲೋ ಟ್ಯೂನ್ಸ್ ಅನ್ನು ಸಹ ಪಡೆಯುತ್ತಾರೆ.
ಏರ್‌ಟೆಲ್‌ನ 1849 ರೂ. ಪ್ಲಾನ್: ಏರ್‌ಟೆಲ್ ತನ್ನ 1959 ರೂ. ಯೋಜನೆಯ ಬೆಲೆಯನ್ನು 1849 ರೂ.ಗಳಿಗೆ ಬದಲಾಯಿಸಿದೆ. ಏರ್‌ಟೆಲ್ ಈ ಪ್ಲಾನ್ನಲ್ಲಿ ಒಟ್ಟು 110 ರೂಪಾಯಿಗಳಷ್ಟು ಕಡಿತಗೊಳಿಸಿದೆ. ಈ ಯೋಜನೆಯಲ್ಲಿ ಬಳಕೆದಾರರು 365 ದಿನಗಳ ಮಾನ್ಯತೆ ಜೊತೆ ಅನ್ಲಿಮಿಟೆಡ್ ಕಾಲ್ಸ್ ಮತ್ತು 3600 ಉಚಿತ ಎಸ್ಎಮ್ಎಸ್ ಲಾಭವನ್ನು ಪಡೆಯಲಿದ್ದಾರೆ. ಈ ಪ್ಲಾನ್ನಲ್ಲಿ ಬಳಕೆದಾರರಿಗೆ ಡೇಟಾದ ಪ್ರಯೋಜನ ಸಿಗುವುದಿಲ್ಲ. ಇದಲ್ಲದೇ ಈ ಪ್ಲಾನ್ ಜೊತೆ ಬಳಕೆದಾರರು ಅಪೊಲೊ 24/7 ಸರ್ಕಲ್ ಮೆಂಬರ್ಶಿಪ್ ಮತ್ತು 3 ತಿಂಗಳವರೆಗೆ ಉಚಿತ ಹಲೋ ಟ್ಯೂನ್‌ಗಳನ್ನು ಸಹ ಪಡೆಯುತ್ತಾರೆ.
ಬೆಲೆ ಇಳಿಸಲು ಟ್ರಾಯ್ ಆದೇಶ: ವರದಿ: ಏರ್‌ಟೆಲ್ ತನ್ನ ಎರಡು ಪ್ಲಾನ್ ಪರಿಚಯಿಸುವುದಕ್ಕೂ ಮೊದಲು ರೂ.509 ಮತ್ತು ರೂ.1999 ಪ್ಲಾನ್ ತೆಗೆದುಹಾಕಿತ್ತು. ಬಳಿಕ 1959 ರೂಪಾಯಿಯ ಪ್ಲಾನ್ ಅನ್ನು ಘೋಷಿಸಿತು. ಆದ್ರೆ 1999 ರೂಪಾಯಿ ರೀಚಾರ್ಜ್ ಪ್ಲಾನ್ನಲ್ಲಿ ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್, ದಿನಕ್ಕೆ 100 ಎಸ್ಎಮ್ಎಸ್ ಜೊತೆಗೆ ಒಟ್ಟು 24GB ಡೇಟಾ ಮತ್ತು ಎಕ್ಸ್‌ಟ್ರೀಮ್ ಅಪ್ಲಿಕೇಶನ್‌ಗಳ ಪ್ರಯೋಜನಗಳನ್ನು ನೀಡಿತ್ತು. ಈ ಯೋಜನೆಯ ಬದಲಿಗೆ ಕಂಪನಿಯು ಕೇವಲ 40 ರೂ. ಕಡಿಮೆ ಮಾಡಿದಲ್ಲದೆ 24GB ಡೇಟಾ ಮತ್ತು ಕೆಲ ಅಪ್ಲಿಕೇಶನ್‌ಗಳ ಪ್ರಯೋಜನಗಳನ್ನು ಕಸಿದುಕೊಂಡಿದೆ. ಅಷ್ಟೇ ಅಲ್ಲ ಒಟ್ಟು 36,500 SMS ಬದಲಿಗೆ, ಕೇವಲ 3,600 SMS ಸೌಲಭ್ಯವನ್ನು ಒದಗಿಸಿದೆ. ಅಂದರೆ ಈ ಪ್ಲಾನ್ ಅನ್ನು ಏರ್‌ಟೆಲ್ 1,959 ರೂ.ಗಳಿಗೆ ಪರಿಚಯಿಸಿತ್ತು.
ಇನ್ನು ಏರ್‌ಟೆಲ್ ಹಳೆಯ ರೂ 509 ಯೋಜನೆಯಿಂದ ಕೇವಲ ರೂ 10 ರಷ್ಟು ಬೆಲೆಯನ್ನು ಕಡಿಮೆ ಮಾಡಿ ರೂ. 499ರ ರೀಚಾರ್ಜ್ ಪ್ಲಾನ್ ಪರಿಚಯಿಸಿತ್ತು. ಅಷ್ಟೇ ಅಲ್ಲ ಈ ಪ್ಲಾನ್ ಮೂಲಕ 6GB ಡೇಟಾ ಮತ್ತು ಕೆಲ ಅಪ್ಲಿಕೇಶನ್‌ಗಳ ಪ್ರಯೋಜನಗಳನ್ನು ಏರ್‌ಟೆಲ್ ಕಸಿದುಕೊಳ್ಳಲಾಗಿತ್ತು. ಇದಲ್ಲದೆ 8,400 ಎಸ್ಎಮ್ಎಸ್ ಬದಲಿಗೆ ಕೇವಲ 900 ಎಸ್ಎಮ್ಎಸ್ ಸೌಲಭ್ಯವನ್ನು ಒದಗಿಸಲಾಗಿತ್ತು. ಏರ್‌ಟೆಲ್‌ನ ಈ ಹೊಸ ರೀಚಾರ್ಜ್ ಪ್ಲಾನ್ಗಳು ಬಳಕೆದಾರರಿಗೆ ನಷ್ಟವನ್ನುಂಟು ಮಾಡುತ್ತಿತ್ತು.
ಮಾಧ್ಯಮಗಳ ಪ್ರಕಾರ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೋಡಾಫೋನ್-ಐಡಿಯಾ ಟೆಲಿಕಾಂ ಕಂಪನಿಗಳಿಗೆ ಹೊಸದಾಗಿ ಪ್ರಾರಂಭಿಸಲಾದ ವಾಯ್ಸ್ ಕಾಲ್ಸ್ ಪ್ಲಾನ್ಗಳ ಬೆಲೆಯನ್ನು ಕಡಿಮೆ ಮಾಡುವಂತೆ ಹೇಳಿದ್ದೇವೆ ಎನ್ನಲಾಗಿದೆ. ಆದರೆ ಈಗ ಏರ್‌ಟೆಲ್ ತನ್ನ ವೆಬ್‌ಸೈಟ್‌ನಲ್ಲಿ ಹೊಸದಾಗಿ ಬಿಡುಗಡೆ ಮಾಡಲಾದ 499 ಮತ್ತು 1959 ರೂ.ಗಳ ಕರೆ ಯೋಜನೆಗಳ ಬೆಲೆಯನ್ನು ಕ್ರಮವಾಗಿ 469 ಮತ್ತು 1849 ರೂ.ಗಳಿಗೆ ಇಳಿಸಿದೆ. ಇದರರ್ಥ ಕಂಪನಿಯು ಈ ಎರಡು ಹೊಸ ಯೋಜನೆಗಳ ಬೆಲೆಯನ್ನು ಕ್ರಮವಾಗಿ 30 ಮತ್ತು 110 ರೂ.ಗಳಷ್ಟು ಕಡಿಮೆ ಮಾಡಿದೆ.