ETV Bharat / state

ಜಮೀನು ಆಸ್ತಿ ಹಂಚಿಕೆ ವಿಚಾರ.. ಮದುವೆಯಾಗಲಿ ತಡೀ ಎಂದ ಅಣ್ಣನನ್ನೇ ಕೊಂದು ಹಾಕಿದ ತಮ್ಮ - ಹನುಮಸಾಗರ ಪೊಲೀಸ್​ ಠಾಣೆ

ಆಸ್ತಿನ ವಿಚಾರವಾಗಿ ಅಣ್ಣನನ್ನೇ ಕೊಂದ ತಮ್ಮ - ಮದುವೆಯಾಗಲಿ ತಡಿ ನಂತರ ಆಸ್ತಿ ಹಂಚಿಕೆ ಎಂದಿದೆ ಕೊಲೆಗೆ ಕಾರಣ - ಮದುವೆಯಾಗದೇ ಖಿನ್ನತೆಗೆ ಒಳಗಾಗಿದ್ದ ಕೊಲೆ ಆರೋಪಿ ಮಲ್ಲಪ್ಪ ಕಡಿವಾಲರ್​ -ಕುಷ್ಟಗಿ-ಇಲಕಲ್​ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ವಣಗೇರಾ ಟೋಲ್​ ಪ್ಲಾಜಾ ಬಳಿ ಕಳ್ಳತನ

Accused of murder
ಕೊಲೆ ಆರೋಪಿ
author img

By

Published : Feb 3, 2023, 8:08 AM IST

Updated : Feb 3, 2023, 9:25 AM IST

ಕುಷ್ಟಗಿ(ಕೊಪ್ಪಳ): ತಾಲೂಕಿನ ಪಟ್ಟಲಚಿಂತಿ ಗ್ರಾಮದಲ್ಲಿ ಮದುವೆ ಬಳಿಕ ಆಸ್ತಿ ಹಂಚಿಕೆ ಎಂದಿದ್ದಕ್ಕೆ ತಮ್ಮ, ಒಡ ಹುಟ್ಟಿದ ಅಣ್ಣನನ್ನು ಕೊಲೆ ಮಾಡಿದ ಘಟನೆ ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ನಡೆದಿದೆ.

ಯಮನೂರಪ್ಪ ಬಸಪ್ಪ ಕಡಿವಾಲರ್ (35) ಮೃತ ದುರ್ದೈವಿ ಅಣ್ಣ. ಯಮನೂರಪ್ಪನಿಗೆ ಕೆಲಸದ ನೆಪದಲ್ಲಿ ಬಂದ ಯಮರೂಪಿ ತಮ್ಮ ಮಲ್ಲಪ್ಪ ಕಡಿವಾಲರ್ (30) ನೊಂದಿಗೆ ಏಕಾಏಕಿ ಜಗಳಕ್ಕೆ ಇಳಿದಿದ್ದಾನೆ. ಮಾತಿಗೆ ಮಾತು ಬೆಳೆದು ತಳ್ಳಾಟ ನೂಕಾಟ ನಡೆಸಿ, ಸ್ನಾನದ ಕೊಠಡಿಯಲ್ಲಿ ಕಟ್ಟಿಗೆಯಿಂದ ಭೀಕರವಾಗಿ ಹೊಡೆದು ಕೆಳಗೆ ಕೆಡವಿ ಚಾಕುವಿನಿಂದ ಭೀಭತ್ಸವಾಗಿ ಮನಬಂದಂತೆ ಇರಿದು ಕೊಂದು ಹಾಕಿದ್ದಾನೆ. ನಂತರ ಕೊಲೆ ನಡೆದ ಸ್ಥಳದಲ್ಲಿ ಕದಲದೇ ಕುಳಿತು ಪೊಲೀಸರಿಗೆ ಶರಣಾಗಿದ್ದಾನೆ.

ಪಟ್ಟಣಚಿಂತಿ ಗ್ರಾಮದ ಬಸಪ್ಪ ಕಡಿವಾಲರ್ ಅವರಿಗೆ ನಾಲ್ವರು ಗಂಡು ಮಕ್ಕಳಿದ್ದು, 16 ಎಕರೆ ಜಮೀನು ಇತ್ತು. ಶರಣಪ್ಪ, ನಾಗಪ್ಪ, ಯಮನೂರಪ್ಪ, ಮಲ್ಲಪ್ಪ ಈ ನಾಲ್ವರು ಸಹೋದರರಲ್ಲಿ ಕೊಲೆ ಆರೋಪಿ ಮಲ್ಲಪ್ಪ ಕೊನೆಯವನಾಗಿದ್ದಾನೆ. ಈತನನ್ನು ಹೊರತು ಪಡಿಸಿ ಮೂವರು ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದರು. ಆರೋಪಿ ಮಲ್ಲಪ್ಪ ಮಾತ್ರ ಎರಡನೇ ಸಹೋದರ ನಾಗಪ್ಪನ ಜೊತೆಯಲ್ಲಿದ್ದ. ಇವರ ಪಿತ್ರಾರ್ಜಿತ 16 ಎಕರೆ ಆಸ್ತಿಯಲ್ಲಿ ತನಗೆ ಸೇರಬೇಕಾದ ಆಸ್ತಿ ಹಂಚಿಕೆಗೆ ಅಣ್ಣ ಯಮನೂರಪ್ಪ ಅವರನ್ನು ಒತ್ತಾಯಿಸುತ್ತಲೇ ಇದ್ದ ಎನ್ನಲಾಗಿದೆ.

ಆ ಎಲ್ಲ ಸಂದರ್ಭದಲ್ಲಿ ಯಮನೂರಪ್ಪ, ತಮ್ಮ ಮಲ್ಲಪ್ಪನಿಗೆ ಮದುವೆಯಾಗಲಿ ನಂತರ ಆಸ್ತಿ ಹಂಚಿಕೆ ವಿಷಯ ಹೇಳುತ್ತೇನೆ ಎಂದು ದಿನದೂಡುತ್ತಿದ್ದರಂತೆ. ಪ್ರತಿಬಾರಿ ತನ್ನ ಅಣ್ಣ ಹೀಗೆ ಹೇಳುತ್ತಿದ್ದಾನೆ ಎಂದು ರೊಚ್ಚಿಗೆದ್ದ ಸಹೋದರ ಮಲ್ಲಪ್ಪ, ಅಣ್ಣನನ್ನು ಕೊಲೆ ಮಾಡುವ ತೀರ್ಮಾನಕ್ಕೆ ಬಂದಿದ್ದಾನೆ. ಮೊದಲೇ ಮದುವೆ ಇಲ್ಲದೇ ಮಾನಸಿಕ ಖಿನ್ನನಾಗಿದ್ದ ಮಲ್ಲಪ್ಪ, ಮೂರನೇ ಸಹೋದರ ಯಮನೂರಪ್ಪನನ್ನು ಕೊಂದು ಹಾಕಿದ್ದಾನೆ. ಮಲ್ಲಪ್ಪನ ಈ ಕೃತ್ಯ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸುವಂತೆ ಮಾಡಿದೆ.

ಇನ್ನೂ ಮಾಹಿತಿ ತಿಳಿಸಿದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಈ ಕೊಲೆ ಸಂಬಂಧ ಹನುಮಸಾಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹನುಮಸಾಗರ ಪಿಎಸ್​ಐ ಸುನೀಲ್ ಎಚ್. ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಲ್ಲಪ್ಪ ಕಡಿವಾಲರ್ ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಗೂಡಂಗಡಿಗೆ ನುಗ್ಗಿ ಸಿಗರೇಟ್, 30 ಸಾವಿರ ಹಣ ಕದ್ದ ಆರೋಪಿ ಸೆರೆ- ವಿಡಿಯೋ

Last Updated : Feb 3, 2023, 9:25 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.