ಗಂಗಾವತಿ: ಯಾವುದೇ ಸುರಕ್ಷಿತ ಸಾಧನಗಳಿಲ್ಲದೆ ನೇರವಾಗಿ ಕೂಲಿ ಕಾರ್ಮಿಕರನ್ನು ಚರಂಡಿಗೆ ಇಳಿಸಿದ ಗುತ್ತಿಗೆದಾರರಿನಿಗೆ ನೋಟಿಸ್ ನೀಡಲಾಗುವುದು ಎಂದು ನಗರಸಭೆಯ ಪೌರಾಯುಕ್ತ ಎಸ್.ಎಫ್. ಈಳಿಗೇರ ತಿಳಿಸಿದ್ದಾರೆ.
ಈಟಿವಿ ಭಾರತದಲ್ಲಿ ಪ್ರಸಾರವಾದ ಸುರಕ್ಷಾ ಸಾಧನಗಳಿಲ್ಲದೆ ಚರಂಡಿ ಸ್ವಚ್ಛಗೊಳಿಸಿದ ಕಾರ್ಮಿಕರು... ಇದಕ್ಕೆ ಹೊಣೆ ಯಾರು? ವರದಿಯನ್ನು ಗಮನಿಸಿದ ಅಧಿಕಾರಿ, ಸುರಕ್ಷತೆ ಪರಿಕರಗಳನ್ನು ಬಳಸದೆ ಕಾರ್ಮಿಕರನ್ನು ಚರಂಡಿಗೆ ಇಳಿಸಿದ್ದ ಗುತ್ತಿಗೆದಾರನಿಗೆ ನಗರ ಸಭೆ ಪೌರಾಯುಕ್ತ ಎಸ್.ಎಫ್ ಈಳಿಗೇರ್ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದ್ದಾರೆ.
ಪೌರಾಯುಕ್ತರಿಗೂ ನೋಟಿಸ್, ಜಿಲ್ಲಾಧಿಕಾರಿ: ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆಯ ಪೌರಾಯುಕ್ತರಿಗೆ ನೋಟಿಸ್ ಜಾರಿ ಮಾಡುವುದಾಗಿಯೂ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಪ್ರಕರಣ ಹಿನ್ನೆಲೆ
ನಗರದಲ್ಲಿ ಅಮೃತನಗರ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿ ನಡೆಯುತ್ತಿವೆ. ಈ ಪೈಕಿ ಚರಂಡಿ ಕಾಮಗಾರಿಯೂ ನಡೆಯುತ್ತಿತ್ತು, ಆದರೆ ಗುತ್ತಿಗೆದಾರ ಕಾರ್ಮಿಕರಿಗೆ ಸುರಕ್ಷಾ ಸಾಧನಗಳನ್ನು ನೀಡದೆ ನೇರವಾಗಿ ಚರಂಡಿಗೆ ಇಳಿಸಿದ್ದರು. ಈ ಕುರಿತಾಗಿ ಈಟಿವಿ ಭಾರತ ವರದಿ ಮಾಡಿತ್ತು.