ETV Bharat / state

ಬಿರುಗಾಳಿ ಸಹಿತ ಮಳೆಗೆ ಟೋಲ್‌ಗೇಟ್‌ಗಳೇ ಕಿತ್ಹೋದವು.. ಸುಂಕ ವಸೂಲಿ ಮಾತ್ರ ಬಿಡಲಿಲ್ಲ

ರಾಷ್ಟ್ರೀಯ ಹೆದ್ದಾರಿ 50ರ ಚತುಷ್ಪಥ ರಸ್ತೆಯಲ್ಲಿರುವ ಟೋಲ್ ಗೇಟ್‌ನ ತಗಡು ಮತ್ತು ಗೇಟ್‌ಗಳು ಭಾರಿ ಗಾಳಿ ಮಳೆಗೆ ಕಿತ್ತುಹೋಗಿವೆ.

ಭಾರಿ ಗಾಳಿ ಮಳೆಗೆ ಟೋಲ್ ಗೇಟ್ ತಗಡಿನ ಶಿಟ್‌ಗಳು ಕಿತ್ತುಹೋಗಿವೆ
author img

By

Published : May 21, 2019, 10:45 PM IST

ಕೊಪ್ಪಳ : ಜಿಲ್ಲೆಯ ಕುಷ್ಠಗಿ ತಾಲೂಕಿನ ಕೆ.ಬೋದೂರು ತಾಂಡಾ ಸೇರಿದಂತೆ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿದೆ.‌ ಗಾಳಿ ಮಳೆಗೆ ಟೋಲ್‌ಗೇಟ್‌ನ ತಗಡಿನ ಶೀಟ್‌ಗಳೇ ಕಿತ್ತುಹೋಗಿದ್ದು ಕೆಲಕಾಲ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು.

ಜಿಲ್ಲೆಯ ಕೆ. ಬೋದೂರು ತಾಂಡಾ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50 ರ ಚತುಷ್ಪಥ ರಸ್ತೆಯಲ್ಲಿರುವ ಟೋಲ್‌ಗೇಟ್‌ನ ತಗಡು ಮತ್ತು ಗೇಟ್‌ಗಳು ಭಾರಿ ಗಾಳಿ ಮಳೆಗೆ ಕಿತ್ತುಹೋಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.

ಭಾರಿ ಗಾಳಿ ಮಳೆಗೆ ಟೋಲ್ ಗೇಟ್‌ನ ತಗಡಿನ ಶೀಟ್‌ಗಳು ಕಿತ್ತುಹೋಗಿವೆ

ಸ್ವತಃ ಬಸ್ ನಿರ್ವಾಹಕರು ಹಾಗೂ ಪ್ಯಾಸೆಂಜರ್ ಸೇರಿ ದಾರಿ ಸುಗಮ ಮಾಡಿಕೊಂಡರು. ಇಂತಹ ಪರಿಸ್ಥಿತಿಯಲ್ಲಿಯೂ ಸಹ ಟೋಲ್ ಸಿಬ್ಬಂದಿ ವಾಹನಗಳ ಸವಾರರಿಂದ ಸುಂಕ ವಸೂಲಿ ಮಾಡಿದ್ದು ಪ್ರಯಾಣಿಕರು ಅಸಮಧಾನಕ್ಕೂ ಕಾರಣವಾಯಿತು. ಸ್ಥಳಕ್ಕೆ ಕುಷ್ಠಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Intro:Body:ಕೊಪ್ಪಳ:- ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ. ಬೋದೂರು ತಾಂಡಾ ಸೇರಿದಂತೆ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿದೆ.‌ ಗಾಳಿ ಮಳೆಗೆ ಟೋಲ್ ಗೇಟ್ ನ ತಗಡಿನ ಶಿಟ್‌ಗಳು ಕಿತ್ತುಹೋಗಿವೆ. ಕೆ. ಬೋದೂರು ತಾಂಡಾ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ೫೦ ರ ಚತುಷ್ಪತ ರಸ್ತೆಯಲ್ಲಿರುವ ಟೋಲ್ ಗೇಟ್ ನ ತಗಡುಗಳು ಗಾಳಿ ಮಳೆಗೆ ಕಿತ್ತುಹೋಗಿದ್ದು ಟೋಲ್ ನ ಗೇಟ್ ಗಳು ಸಹ ಕಿತ್ತುಹೋಗಿವೆ. ಇದರಿಂದ ಟೋಲ್ ಗೇಟ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪರಿಣಾಮವಾಗಿ ಪ್ರಯಾಣಿಕರು ಪರದಾಡುವಂತಾಯಿತು. ಸ್ವತಃ ಬಸ್ ನಿರ್ವಾಹಕರು ಹಾಗೂ ಪ್ಯಾಸೆಂಜರ್ ಸೇರಿ ದಾರಿ ಸುಗಮ ಮಾಡಿಕೊಂಡರು. ಇಂತಹ ಪರಿಸ್ಥಿತಿಯಲ್ಲಿಯೂ ಸಹ ಟೋಲ್ ಸಿಬ್ಬಂದಿ ವಾಹನಗಳ ಸವಾರರಿಂದ ಹಣ ವಸೂಲಿ ಮಾಡಿದ್ದು ಪ್ರಯಾಣಿಕರು ಅಸಮಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಕುಷ್ಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.