ಕೊಪ್ಪಳ : ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯ ಮಾಜಿ ಸೈನಿಕರಿಬ್ಬರು ವಿಜಯಶಾಲಿಗಳಾಗಿದ್ದಾರೆ.
ಕೊಪ್ಪಳ ತಾಲೂಕಿನ ಹ್ಯಾಟಿ ಹಾಗೂ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಸೈನಿಕರನ್ನು ಮತದಾರರು ಕೈ ಹಿಡಿದಿದ್ದಾರೆ.
ಬನ್ನಿಕೊಪ್ಪ ಗ್ರಾಮದ ಮಾಜಿ ಸೈನಿಕ ನಾಗರಾಜ ವೆಂಕಟಾಪೂರ್ ಅವರು 107 ಮತಗಳಿಂದ ಗೆಲುವು ಸಾಧಿಸಿದ್ರೆ, ಹ್ಯಾಟಿ ಗ್ರಾಮದ ಶೇಖರಪ್ಪ ಘಂಟಿ ಅವರು 3 ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
ಈ ಇಬ್ಬರು ಮಾಜಿ ಸೈನಿಕರು 17 ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ.