ಕುಷ್ಟಗಿ (ಕೊಪ್ಪಳ): ಪಟ್ಟಣದ ಡಾ.ರಾಜಕುಮಾರ್ ಕಲ್ಯಾಣ ಮಂಟಪ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದ್ದು, ಪುರಸಭೆ ದಿವ್ಯ ನಿರ್ಲಕ್ಷ್ಯದಿಂದ ಇದೀಗ ದಿನದಿಂದ ದಿನಕ್ಕೆ ಅವ್ಯವಸ್ಥೆಯ ಆಗರವಾಗುತ್ತಿದೆ.
ಕಟ್ಟಡ ದುರಸ್ಥಿ ಮಾಡಿಸಿ ಸಮರ್ಪಕವಾಗಿ ಬಳಸಿಕೊಳ್ಳದ ಕಾರಣ ಮದ್ಯ ವ್ಯಸನಿಗಳು ಇಲ್ಲಿ ಕುಡಿದು, ಜಾಗ ಹಾಳು ಮಾಡ್ತಿದ್ದಾರೆ. ಸುಮಾರು ಒಂದೂವರೆ ದಶಕದಷ್ಟು ಹಳೆಯದಾಗಿರುವ ಈ ಕಟ್ಟಡ ಪುರಸಭೆ ಅಧೀನದಲ್ಲಿದೆ. ಕಟ್ಟಡವನ್ನ ಸಂಪೂರ್ಣವಾಗಿ ತೆರವುಗೊಳಿಸಿ, ಹೊಸ ಕಟ್ಟಡ ನಿರ್ಮಾಣಮಾಡಬೇಕು ಎಂಬುದು ಸಂಘ-ಸಂಸ್ಥೆಗಳ ಬೇಡಿಕೆಯಾಗಿದ್ದು, ಇದಕ್ಕೆ ಸ್ಥಳೀಯ ಶಾಸಕರು ಹಾಗೂ ಪುರಸಭೆ ತಲೆಕೆಡಿಸಿಕೊಂಡಿಲ್ಲ.
ಪ್ರತಿದಿನ ಮದ್ಯ ಖರೀದಿ ಮಾಡಿ ಇಲ್ಲಿಗೆ ಬರುವ ಕುಡುಕರು ಇದೇ ಸ್ಥಳದಲ್ಲಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿರುವುದು ನಿಜಕ್ಕೂ ಪ್ರಜ್ಞಾವಂತ ನಾಗರಿಕರು ತಲೆ ತಗ್ಗಿಸುವಂತೆ ಮಾಡಿದೆ.