ಕೊಪ್ಪಳ: ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಕೆಟ್ಟು ಹೋದ ಆಹಾರ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಗರದಲ್ಲಿನ ಕೋವಿಡ್ -19 ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಸೋಂಕಿತರಿಗೆ ಆಹಾರ ವಿತರಿಸಲಾಗಿದೆ. ಆದರೆ ಆಹಾರ ಕೆಟ್ಟು ಹೋಗಿತ್ತು ಎಂದು ಸೋಂಕಿತರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಕೆಟ್ಟು ಹೋದ ಆಹಾರ ನೀಡಿದ್ದಾರೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.