ಕೊಪ್ಪಳ: ಪಂಪಾಸರೋವರದಲ್ಲಿ ನಿಧಿಗಾಗಿ ದೇವಿ ಮೂರ್ತಿ ತೆರವುಗೊಳಿಸಿದ್ದಾರೆ ಎನ್ನುವುದೆಲ್ಲ ಶುದ್ಧ ಸುಳ್ಳು. ದೇವಿ ನನ್ನಿಂದ ಜೀರ್ಣೋದ್ಧಾರ ಕಾರ್ಯ ಮಾಡಿಸುತ್ತಿದ್ದಾಳೆ. ಈಗ ನಡೆದಿರುವ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸಲಾಗುವುದು. ಯಾರೋ ಕೆಲವರು ಆರೋಪ ಮಾಡಿ ಗೊಂದಲ ಸೃಷ್ಟಿಯಾಗಿದೆ ಎಂದು ಸಚಿವ ಬಿ ಶ್ರೀರಾಮುಲು ಹೇಳಿದರು.
ಪಂಪಾಸರೋವರದಲ್ಲಿ ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿದ ಅವರು, ದೇವರ ಮೂರ್ತಿಗಳನ್ನ ತೆರವುಗೊಳಿಸಿದ್ದು, ಇದೇ ಮೊದಲೇನಲ್ಲ. ಈ ಹಿಂದೆ ಹಂಪಿಯಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಂಡ ಸಂದರ್ಭದಲ್ಲಿ ಮೂರ್ತಿ ತೆಗೆಯಲಾಗಿತ್ತು ಎಂದರು.
ಆರ್ಎಸ್ಎಸ್ ಬಗ್ಗೆ ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಗೆ ಆರ್ಎಸ್ಎಸ್ ಬಗ್ಗೆ ತಿಳುವಳಿಕೆ ಕಡಿಮೆ ಇದೆ. ಅದಕ್ಕಿಂತ ಮುಖ್ಯವಾಗಿ ಅವರಿಗೆ ಆರ್ಎಸ್ಎಸ್ ಭಯ ಹೆಚ್ಚಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವ ಶ್ರೀರಾಮುಲು ತಿರುಗೇಟು ನೀಡಿದರು.
ಇದನ್ನೂ ಓದಿ: ಮುಂದಿನ ಸಿಎಂ ಅಭ್ಯರ್ಥಿ ಜಿ. ಪರಮೇಶ್ವರ್ ಅಂತಾ ಘೋಷಣೆ ಮಾಡಲಿ: ಡಿಕೆಶಿ-ಸಿದ್ದರಾಮಯ್ಯಗೆ ಶೆಟ್ಟರ್ ಸವಾಲು