ETV Bharat / state

ಕೊರೊನಾ ವಾರಿಯರ್ಸ್​ಗೆ ಗೌರವ: ಸಸಿ ನೆಡುವ ಮೂಲಕ ಪತ್ರಿಕಾ ದಿನಾಚರಣೆಗೆ ನಿರ್ಧಾರ

ಕೊರೊನಾದಂತ ವಿಷಮ ಸ್ಥಿತಿಯಲ್ಲಿ ಪತ್ರಿಕಾ ದಿನಾಚರಣೆಯನ್ನು ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶಕ್ಕೆ ಇಲ್ಲಿನ ಕಾರ್ಯನಿರತ ಪತ್ರಕರ್ತರು, ಕೊರೊನಾ ವಾರಿಯರ್ಸ್​ಗೆ ಸನ್ಮಾನ ಹಾಗೂ ಸಸಿ ನೆಡುವ ನಿರ್ಣಯ ಕೈಗೊಂಡಿದ್ದಾರೆ.

Meeting
Meeting
author img

By

Published : Jul 4, 2020, 8:15 PM IST

ಗಂಗಾವತಿ: ಕೊರೊನಾದಂತಹ ವಿಷಮ ಸ್ಥಿತಿಯಲ್ಲಿ ಪತ್ರಿಕಾ ದಿನಾಚರಣೆಯನ್ನು ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಇಲ್ಲಿನ ಕಾರ್ಯನಿರತ ಪತ್ರಕರ್ತರು ಕೊರೊನಾ ವಾರಿಯರ್ಸ್​ಗೆ ಸನ್ಮಾನ ಹಾಗೂ ಸಸಿ ನೆಡುವ ನಿರ್ಣಯ ಕೈಗೊಂಡಿದ್ದಾರೆ.

ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬೆಳಗಲ್ ಮಠ ಹಾಗೂ ಕಾರ್ಯದರ್ಶಿ ಹರೀಶ್ ಕುಲ್ಕರ್ಣಿ ನೇತೃತ್ವದಲ್ಲಿ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಸಭೆಯಲ್ಲಿ ಪತ್ರಿಕಾ ದಿನಾಚರಣೆಯನ್ನು ಸರಳವಾಗಿ ಆಚರಿಸುವ ಬಗ್ಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಕೊರೊನಾ ನಿಯಂತ್ರಿಸುವಲ್ಲಿ ವಾರಿಯರ್ಸ್ ರೂಪದಲ್ಲಿ ಕೆಲಸ ಮಾಡಿದವರ ಪೈಕಿ ಆರೋಗ್ಯ, ಪೊಲೀಸ್, ಪಂಚಾಯತ್ ರಾಜ್, ನಗರಸಭೆ, ಕಂದಾಯ ಮೊದಲಾದ ಇಲಾಖೆಗಳ ಆಯ್ದ ಅಧಿಕಾರಿಗಳನ್ನು ಆಹ್ವಾನಿಸಿ ಗೌರವ ಸಲ್ಲಿಸುವುದು ಹಾಗೂ ಸಸಿ ನೆಟ್ಟು ಪ್ರಕೃತಿ ಪೋಷಣೆಯ ಪ್ರತಿಜ್ಞೆ ಸ್ವೀಕಾರದ ಮೂಲಕ ಪತ್ರಿಕಾ ದಿನಾಚರಣೆ ಆಚರಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.