ಕೊಪ್ಪಳ: ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕೆಯ ಮೇಲೆ ನಗರದ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ದಾಖಲಿಸಲಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಶಂಕಿತ ವ್ಯಕ್ತಿಯ ರಿಪೋರ್ಟ್ ಬಂದಿದ್ದು ಕೊರೊನಾ ನೆಗಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ಫೆಬ್ರವರಿ 29 ರಂದು ಸೌದಿ ಅರೇಬಿಯಾದಿಂದ ಹೈದರಾಬಾದ್ ಮೂಲಕ ಗಂಗಾವತಿಗೆ ವ್ಯಕ್ತಿ ಬಂದಿದ್ದ. ಬಳಿಕ ಬಾಗಲಕೋಟೆ, ಲಿಂಗಸಗೂರ, ರಾಯಚೂರಿಗೆ ಪ್ರವಾಸ ಮಾಡಿದ್ದನು. ಬಳಿಕ ಮಾರ್ಚ್ 18 ರಂದು ಕೆಮ್ಮು-ಜ್ವರದಿಂದ ಬಳಲಿದ್ದರಿಂದ ರಾತ್ರಿ ಕೊಪ್ಪಳ ಜಿಲ್ಲಾಸ್ಪತ್ರೆಯ ಐಸೋಲೇಶನ್ ವಾರ್ಡ್ಗೆ ದಾಖಲಿಸಲಾಗಿತ್ತು. ಅಲ್ಲದೆ ಆ ವ್ಯಕ್ತಿಯ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಲ್ಯಾಬ್ಗೆ ಕಳಿಸಲಾಗಿತ್ತು.
ಈಗ ವರದಿ ಬಂದಿದ್ದು, ನೆಗೆಟಿವ್ ಇದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.