ETV Bharat / state

ಕೊಪ್ಪಳ ವೈದ್ಯಕೀಯ ತಪಾಸಣಾ ಕೇಂದ್ರಗಳಿಗೆ ಕೊರೊನಾ ಸೋಂಕಿತ ಭೇಟಿ.. - ಕೊಪ್ಪಳ ಎಂಆರ್​ಐ ಸ್ಕ್ಯಾನಿಂಗ್ ಸೆಂಟರ್

ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಜನ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 23 ಜನರನ್ನ ಪತ್ತೆ ಮಾಡಲಾಗಿದೆ. ಸೋಂಕಿತ ವ್ಯಕ್ತಿಯ ಕುಟುಂಬದ ಗಂಟಲು ದ್ರವದ ಮಾದರಿ ತೆಗೆದು ಲ್ಯಾಬ್​ಗೆ ಕಳುಹಿಸಲಾಗಿದೆ. ಇಂದು ರಿಪೋರ್ಟ್ ಬರುವ ಸಾಧ್ಯತೆಯಿದೆ.

Corona infected persona visit to Koppal ks hospital and mri scanning center
ಕೊಪ್ಪಳ ತಪಾಸಣಾ ಕೇಂದ್ರಗಳಿಗೆ ಕೊರೊನಾ ಸೋಂಕಿತ ಭೇಟಿ..ಆರೋಗ್ಯ ಇಲಾಖೆ ಪರಿಶೀಲನೆ
author img

By

Published : Jun 1, 2020, 4:57 PM IST

ಕೊಪ್ಪಳ : ನಿನ್ನೆ ಬೆಂಗಳೂರಿನಲ್ಲಿ ಕೊರೊನಾ ಸೋಂಕು ದೃಢಪಟ್ಟ ಕೊಪ್ಪಳ ಮೂಲದ ವ್ಯಕ್ತಿ (ಪಿ-3009) ನಗರದ ಖಾಸಗಿ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರ್​ಗೆ ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.

ಕೋವಿಡ್‌-19 ಕುರಿತಂತೆ ಜಿಲ್ಲಾಧಿಕಾರಿಗಳಿಂದ ಮಾಹಿತಿ..

ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್, ಪಿ-3009ಗೆ ಸುಮಾರು ಮೂರ್ನಾಲ್ಕು ತಿಂಗಳಿನಿಂದ ಕಫ ಇದೆ ಎಂದು ಗೊತ್ತಾಗಿದೆ. ಅಲ್ಲದೆ ಅವರು ಟ್ಯೂಮರ್ ಪೇಷಂಟ್ ಆಗಿರುವ ಹಿನ್ನೆಲೆಯಲ್ಲಿ ಇದರ ಪರೀಕ್ಷೆಗೆ ನಗರದ ಎಂಆರ್​ಐ ಸ್ಕ್ಯಾನಿಂಗ್ ಸೆಂಟರ್ ಹಾಗೂ ಕೆ ಎಸ್ ಆಸ್ಪತ್ರೆಗೆ ತಪಾಸಣೆಗೆ ತೆರಳಿರೋದು ತಿಳಿದು ಬಂದಿದೆ. ಈ ಕುರಿತಂತೆ ಚೆಕ್ ಮಾಡಲಾಗುತ್ತಿದೆ. ಒಂದು ವೇಳೆ ಅವರು ಅಲ್ಲಿಗೆ ಹೋಗಿದ್ದರೂ ಕೊರೊನಾ ಸೋಂಕಿನ ಲಕ್ಷಣಗಳಿರುವ ಮಾಹಿತಿ ಯಾಕೆ ನೀಡಿಲ್ಲ ಎಂದು ಮಾಹಿತಿ ಪಡೆಯಲು ಡಿಹೆಚ್ಒಗೆ ಸೂಚನೆ ನೀಡಲಾಗಿದೆ ಎಂದರು.

ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಜನ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 23 ಜನರನ್ನ ಪತ್ತೆ ಮಾಡಲಾಗಿದೆ. ಸೋಂಕಿತ ವ್ಯಕ್ತಿಯ ಕುಟುಂಬದ ಗಂಟಲು ದ್ರವದ ಮಾದರಿ ತೆಗೆದು ಲ್ಯಾಬ್​ಗೆ ಕಳುಹಿಸಲಾಗಿದೆ. ಇಂದು ರಿಪೋರ್ಟ್ ಬರುವ ಸಾಧ್ಯತೆಯಿದೆ. ಸೋಂಕಿತ ವ್ಯಕ್ತಿಯಿದ್ದ ಕೊಪ್ಪಳದ ಬಿ ಟಿ ಪಾಟೀಲ್ ನಗರದ ಮನೆಯ ಸುತ್ತಮುತ್ತ 100 ಮನೆಗಳ ವ್ಯಾಪ್ತಿಯನ್ನ ಕಂಟೇನ್​ನ್ಮೆಂಟ್​ ಝೋನ್ ಮಾಡಲಾಗಿದೆ. ಅಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ. ಸೋಂಕಿತ ವ್ಯಕ್ತಿ ತನ್ನ ಪತ್ನಿ ಹಾಗೂ ಮಗನೊಂದಿಗೆ ಬೆಂಗಳೂರಿಗೆ ತೆರಳಿದ್ದು, ಅವರನ್ನ ಅಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.