ETV Bharat / state

ಕಾರು ಬೈಕ್​ ನಡುವೆ ಡಿಕ್ಕಿ: ಯುವಕ ದುರ್ಮರಣ - ಕಾರು ಬೈಕ್​ ನಡುವೆ ಡಿಕ್ಕಿ: ಯುವಕ ದುರ್ಮರಣ

ಕ್ಯಾದಿಗುಪ್ಪ ಕ್ರಾಸ್​ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಬೈಕ್​ ನಡುವೆ ಅಪಘಾತ ಸಂಭವಿಸಿ ಯುವಕನೋರ್ವ ಸಾವನ್ನಪ್ಪಿದ್ದಾನೆ.

Car- bike Accident
ಕಾರು ಬೈಕ್​ ನಡುವೆ ಅಪಘಾತ
author img

By

Published : Aug 2, 2020, 7:46 AM IST

ಕುಷ್ಟಗಿ (ಕೊಪ್ಪಳ): ಸಹೋದರಿಗೆ ನಾಗರ ಪಂಚಮಿ ಹಬ್ಬದ ಉಂಡಿ ಕೊಟ್ಟು ಬರಲು ಹೋಗಿದ್ದ ಯುವಕನೋರ್ವ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಘಟನೆ ಕ್ಯಾದಿಗುಪ್ಪ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಕುಷ್ಟಗಿ ತಾಲೂಕಿನ ಗುಡ್ಡದ ಹನುಮಸಾಗರ ಗ್ರಾಮದ ಶರಣಪ್ಪ ನಿರುಪಾದೆಪ್ಪ ಕತ್ತಿ (18) ಮೃತ ಯುವಕ. ಬಸವರಾಜ ಸಣ್ಣ ರಾಮನಗೌಡ ಅಂಗಡಿ (22) ಎಂಬಾತ ಬೈಕ್ ಚಲಾಯಿಸುತ್ತಿದ್ದ. ಈ ಸಂದರ್ಭದಲ್ಲಿ ಬೈಕಿಗೆ ಕಾರು ಡಿಕ್ಕಿಯಾಗಿದ್ದು, ತೀವ್ರ ಗಾಯಗೊಂಡು ಅಸ್ವಸ್ಥರಾಗಿದ್ದ ಇಬ್ಬರು ಬೈಕ್​ ಸವಾರರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶರಣಪ್ಪ ಕತ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಈತ ಹಿರೇಮನ್ನಾಪುರ ಗವಿಸಿದ್ದೇಶ್ವರ ಪ.ಪೂ.ಕಾಲೇಜು ವಿದ್ಯಾರ್ಥಿಯಾಗಿದ್ದ. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು ಒಂದು ವಿಷಯದಲ್ಲಿ ಫೇಲ್ ಆಗಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಯುವಕನ ಅಕಾಲಿಕ ಮರಣದಿಂದ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ.

ಈ ಕುರಿತಂತೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.