ಕೊಪ್ಪಳ: ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಅವರ 'ನನ್ನ ಕಥೆಗಳು' ಎಂಬ ಶೀರ್ಷಿಕೆಯ ಕಥಾ ಸಂಕಲನ ಹಾಗೂ 'ನನ್ನ ನಿಲುವು' ಎಂಬ ಶೀರ್ಷಿಕೆಯ ಲೇಖನಗಳ ಸಂಕಲನಗಳನ್ನು ಹಿರಿಯ ಜಾನಪದ ಸಾಹಿತಿ ಡಾ.ಶಂಭು ಬಳಿಗಾರ ಅವರು ಬಿಡುಗಡೆ ಮಾಡಿದರು.
ಕೊಪ್ಪಳದ ಬನ್ನಿಕೊಪ್ಪದಲ್ಲಿ ನಡೆದ ಕೊಪ್ಪಳ ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.ರೂಪಾ ರಕರಡ್ಡಿ ಅವರು ಬರೆದ ಬಾಲ್ಯ ವಿವಾಹದ ಕುರಿತ ಲೇಖನಗಳ ಪುಸ್ತಕ, ಕಿರುಣಕುಮಾರ ಅಂಗಡಿ ಅವರ ಜೇನು ಹನಿ ಕೃತಿ, ಆಂಜನೇಯ ದೊಡ್ಮನಿ ಅವರ ಮೊದಲ ಹೆಜ್ಜೆ ಕವನ ಸಂಕಲನ ಹಾಗೂ ಶರಣಪ್ಪ ಆದಾಪುರ ಅವರ ಹೊನಲ ಸಿರಿ ಕವನ ಸಂಕಲನ ಕೃತಿಗಳು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಂಡವು.