ETV Bharat / state

ಕೊರೊನಾ ನೆಪವೊಡ್ಡಿ ದರ ಪರಿಷ್ಕರಣೆಗೆ ಹಿಂದೇಟು: ಪ್ರತಿಭಟನೆಗೆ ಮುಂದಾದ ಹಮಾಲರು - APMC Delays on Hamali's Rate Revision

ಗಂಗಾವತಿ ಎಪಿಎಂಸಿ ಅಧಿಕಾರಿಗಳು ಕೊರೊನಾ ನೆಪವೊಡ್ಡಿ ಹಮಾಲಿ ದರ ಪರಿಷ್ಕರಣೆಗೆ ಹಿಂದೇಟು ಹಾಕುತ್ತಿರುವ ಹಿನ್ನೆಲೆ ಗಂಜ್ ಹಮಾಲರು ಸಭೆ ನಡೆಸಿ ಪ್ರತಿಭಟಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

APMC Delays on Hamali's Rate Revision
ಪ್ರತಿಭಟನೆ ನಡೆಸಲು ಹಮಾಲರ ನಿರ್ಧಾರ
author img

By

Published : Jun 4, 2020, 8:48 PM IST

ಗಂಗಾವತಿ: ಕೊರೊನಾದ ನೆಪವೊಡ್ಡಿ ಎಪಿಎಂಸಿ ಅಧಿಕಾರಿಗಳು ಹಮಾಲಿ ದರ ಪರಿಷ್ಕರಣೆ ಮುಂದೂಡುತ್ತಿದ್ದಾರೆ ಎಂದು ಆರೋಪಿಸಿದ ಗಂಜ್ ಹಮಾಲರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಎಪಿಎಂಸಿ ಆವರಣದ ಶ್ರಮಿಕ ಭವನದ ಸಮೀಪ ಅಧ್ಯಕ್ಷ ನಿರುಪಾದಿ ಬೆಣಕಲ್ ನೇತೃತ್ವದಲ್ಲಿ ಸಭೆ ನಡೆಸಿದ 150ಕ್ಕೂ ಹೆಚ್ಚು ಗಂಜ್ ಹಮಾಲರು, ಪ್ರತಿ ಎರಡುವರೆ ವರ್ಷಗಳಿಗೆ ಒಮ್ಮೆ ದರ ಪರಿಷ್ಕರಣೆ ಮಾಡಿಕೊಂಡು ಬರಲಾಗುತ್ತಿದೆ. ಕಳೆದ ವರ್ಷದ ದರ ಜೂನ್ 15ಕ್ಕೆ ಮುಗಿಯಲಿದೆ. ಆದರೆ, ಎಪಿಎಂಸಿ ಅಧಿಕಾರಿಗಳು ಕೊರೊನಾ ನೆಪವೊಡ್ಡಿ ಈ ಬಾರಿ ದರ ಪರಿಷ್ಕರಣೆಗೆ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.

ಎಪಿಎಂಸಿ ಆವರಣದಲ್ಲಿ ಸಭೆ ಸೇರಿದ ಹಮಾಲರು

ದರ ಪರಿಷ್ಕರಣೆಗೆ ಅಧಿಕಾರಿಗಳು ಹಿಂದೇಟು ಹಾಕಿದ್ದರಿಂದ ಎಪಿಎಂಸಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.