ETV Bharat / state

ನಿರ್ಜನ ಪ್ರದೇಶದಲ್ಲಿ ಪ್ರಾಚೀನ ದೇಗುಲ ಪತ್ತೆ, ಸಂಶೋಧಕ ಭೇಟಿ

ಸೂರ್ಯನಾಯಕನ ತಾಂಡಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿರುವ ಈ ದೇವಾಲಯದ ಆವರಣವನ್ನು ರೈತರು ರಸಗೊಬ್ಬರ ದಾಸ್ತಾನು ಮಾಡಲು ಬಳಸಿಕೊಳ್ಳುತ್ತಿದ್ದಾರೆ.

Ancient temple discovered in Gangavathi
ನಿರ್ಜನ ಪ್ರದೇಶದಲ್ಲಿ ಪ್ರಾಚೀನ ದೇಗುಲ ಪತ್ತೆ
author img

By

Published : Sep 2, 2022, 1:31 PM IST

ಗಂಗಾವತಿ: ಜನವಸತಿ ಇಲ್ಲದ ಮತ್ತು ನಿರ್ಜನ ಪ್ರದೇಶದಲ್ಲಿ ಪ್ರಾಚೀನ ದೇಗುಲವೊಂದು ಪತ್ತೆಯಾಗಿದ್ದು, ಬಹುಶಃ ಸುಮಾರು ಐದು ನೂರರಿಂದ ಏಳು ನೂರು ವರ್ಷಗಳ ಹಿಂದೆ ನಿರ್ಮಾಣ ಮಾಡಿರಬಹುದು ಎಂದು ಸಮೀಪದ ಹೊಲಗಳ ರೈತರು ತಿಳಿಸಿದ್ದಾರೆ. ಈ ದೇಗುಲದ ಸ್ಥಳಕ್ಕೆ ಇತಿಹಾಸಕಾರ, ಸಂಶೋಧಕ ಡಾ. ಶರಣಬಸಪ್ಪ ಕೊಲ್ಕಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗಂಗಾವತಿ ನಗರದಿಂದ ಸಿದ್ಧಿಕೇರಿ ಮಾರ್ಗವಾಗಿ ಜನಸಂಚಾರ ವಿರಳವಾಗಿರುವ ಸೂರ್ಯನಾಯಕನ ತಾಂಡಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಬೆಟ್ಟಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಸುಸ್ಥಿತಿಯಲ್ಲಿರುವ ಈ ದೇಗುಲ ಪತ್ತೆಯಾಗಿದೆ. ದೇಗುಲದ ಪ್ರವೇಶದಲ್ಲಿ ಸಭಾ ಮಂಟಪವಿದ್ದು, ಸ್ಥಳೀಯರು ಇದನ್ನು ಕನ್ನಿಕದೇವರ ಗುಡಿ ಎಂದು ಕರೆಯುತ್ತಿದ್ದಾರೆ. ಜನ ಬಳಕೆ ಇಲ್ಲದ್ದರಿಂದ ದೇಗುಲದಲ್ಲಿನ ಆವರಣವನ್ನು ರೈತರು ರಸಗೊಬ್ಬ ದಾಸ್ತಾನು ಮಾಡಲು ಬಳಸಿಕೊಳ್ಳುತ್ತಿದ್ದಾರೆ.

Ancient temple discovered in Gangavathi
ನಿರ್ಜನ ಪ್ರದೇಶದಲ್ಲಿ ಪ್ರಾಚೀನ ದೇಗುಲ ಪತ್ತೆ

ಗರ್ಭಗುಡಿಯಲ್ಲಿ ಈಶ್ವರ ದೇವರ ವಿಗ್ರಹವಿದ್ದು, ಇದರ ಬಲ ಭಾಗದಲ್ಲಿ ಗಣೇಶ, ಎಡ ಭಾಗದಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ದೇವಿಯ ಚಿತ್ರವಿದೆ. ಪ್ರಾಂಗಣದಲ್ಲಿ ಹನುಮನ ವಿಗ್ರಹವಿದ್ದು, ಅದರ ಮೇಲೆ ರಾಮ ಸೀತೆ, ಲಕ್ಷ್ಮಣರ ವಿಗ್ರಹಗಳಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಮಳಲಿ ಮಸೀದಿಯಲ್ಲಿ ಗುರುಮಠ, ಶಿವ, ದೇವಿ ಸಾನಿಧ್ಯ ಗೋಚರ; ಅಷ್ಟಮಂಗಲ ನಡೆಸಲು ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.