ಕುಷ್ಟಗಿ (ಕೊಪ್ಪಳ): ಶಾಸಕರು ಕೇವಲ ಶಾಸನ ರೂಪಿಸುವವರಾಗಿಲ್ಲ, ವರ್ಕ್ ಇನ್ಸ್‌ಪೆಕ್ಟರ್‌ಗಳಾಗಿ ಬದಲಾಗಿದ್ದಾರೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಪಟ್ಟಣದ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಯಾರೂ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಲು ಹೋಗಿ ವಾಸ್ತವ ಸ್ಥಿತಿಗತಿ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಿಲ್ಲ. ಕಾಮಗಾರಿಗಳನ್ನು ನಾವೇ ಖುದ್ದಾಗಿ ನೋಡಲು ತೆರಳಿದ ವೇಳೆ ಅಧಿಕಾರಿಗಳು ಬರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
1975ರ ಸಂದರ್ಭದಲ್ಲಿ, ಆಗಿನ ಶಾಸಕರಿಗೆ ಕಾಮಗಾರಿಗಳ ಮಾಹಿತಿ ಇರುತ್ತಿರಲಿಲ್ಲ. ವಿಧಾನಸಭೆಯಲ್ಲಿ ಶಾಸನಗಳನ್ನು ರೂಪಿಸುವುದು ಅವುಗಳನ್ನು ಅನುಷ್ಠಾನಗೊಳಿಸುವುದಷ್ಟೇ ಆಗಿತ್ತು. ಇದೀಗ ಕಾಲ ಬದಲಾಗಿದೆ. ಕಾಮಗಾರಿ ಮಂಜೂರು ಮಾಡಿಸಿದಾಗಿನಿಂದ ಪೂರ್ಣಗೊಳ್ಳುವರೆಗೂ ಶಾಸಕರೇ ಮೇಲುಸ್ತುವಾರಿ ವಹಿಸುತ್ತಿದ್ದು, ಶಾಸಕರು ವರ್ಕ್ ಇನ್ಸ್‌ಪೆಕ್ಟರ್‌ಗಳಾಗಿದ್ದಾರೆ ಎಂದರು.