ETV Bharat / state

ಭತ್ತದ ಗದ್ದೆಯಂತ ಪ್ರದೇಶದಲ್ಲಿ ಚಿರತೆ ಜಾಡು ಬಯಲು: ಜನರಿಗೆ ದಿಗಿಲು - leopard found in Gangavathi

ಗಂಗಾವತಿಯಲ್ಲಿ ಮತ್ತೆ ಚಿರತೆಯೊಂದು ಪತ್ತೆಯಾಗಿದೆ. ಭತ್ತದ ಗದ್ದೆಯಲ್ಲಿದ್ದ ಚಿರತೆಯನ್ನು ಗಮನಿಸಿದ ದಾರಿಹೋಕರು ತಮಗೆ ಪರಿಚಯವಿದ್ದವರಿಗೆಲ್ಲಾ ದೂರವಾಣಿ ಕರೆ ಮಾಡಿ ಮಾಹಿತಿ ರವಾನಿಸಿದ್ದಾರೆ.

Again leopard found in Gangavathi
ಗಂಗಾವತಿಯಲ್ಲಿ ಚಿರತೆ ಪತ್ತೆ
author img

By

Published : Dec 26, 2020, 1:45 AM IST

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಭತ್ತದ ಗದ್ದೆಯಂತ ಬಯಲು ಪ್ರದೇಶದಲ್ಲಿ ಚಿರತೆ ಕಂಡು ಬಂದಿದ್ದು, ಇದೀಗ ಗ್ರಾಮಸ್ಥರ ನಿದ್ದೆಗೆಡಿಸಿದೆ. ಗ್ರಾಮಸ್ಥರ ಮನವಿ ಮೆರೆಗೆ ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಗಂಗಾವತಿಯಿಂದ ಹೈದರಾಬಾದ್​ಗೆ ತೆರಳುತ್ತಿದ್ದ ಖಾಸಗಿ ಸಾರಿಗೆ ಸಂಸ್ಥೆಯ ಚಾಲಕ ಮೊದಲಿಗೆ ಭತ್ತದ ಗದ್ದೆಯಲ್ಲಿದ್ದ ಚಿರತೆಯನ್ನು ಗಮನಿಸಿದ್ದು ಬಳಿಕ ವಾಹನದಲ್ಲಿದ್ದ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಪ್ರಯಾಣಿಕರು ತಮಗೆ ಪರಿಚಯವಿದ್ದವರಿಗೆಲ್ಲಾ ದೂರವಾಣಿ ಕರೆ ಮಾಡಿ ಮಾಹಿತಿ ರವಾನಿಸಿದ್ದಾರೆ.

ಇದು ಸಾಕಷ್ಟು ಸಂಚಲನ ಸೃಷ್ಟಿಸಿದ್ದು, ಕೂಡಲೆ ತಾಲೂಕು ಪಂಚಾಯತಿ ಅಧ್ಯಕ್ಷ ಮೊಹಮ್ಮದ್ ರಫಿ ಸೇರಿದಂತೆ ಗ್ರಾಮದ ಹತ್ತಾರು ಯುವಕರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದು ಪರಿಶೀಲಿಸುವಂತೆ ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ಶಿವರಾಜ ಮೇಟಿ, ಭತ್ತದ ಗದ್ದೆಯಂತ ಸಂಪೂರ್ಣ ಬಯಲು ಪ್ರದೇಶದಲ್ಲಿ ಚಿರತೆ ಸಂಚರಿಸುವ ಸಾಧ್ಯತೆ ತೀರಾಕಡಿಮೆ. ಗ್ರಾಮದ ಸಮೀಪದಲ್ಲಿಯೇ ಮಸಣ ಇರುವ ಕಾರಣಕ್ಕೆ ಕತ್ತೆ ಕಿರುಬ ಅಥವಾ ಕಾಡು ಬೆಕ್ಕು ಕಂಡು ಮಬ್ಬುಗತ್ತಲಲ್ಲಿ ಚಿರತೆ ಎಂದು ಭಾವಿಸಿರಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.